ಕುಂದಾಪುರ: ಬೆಂಗಳೂರು ಅಯ್ಯಂಗಾರ್ ಬೇಕರಿ ಶುಭಾರಂಭ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ತಿರುಮಲ ಕಾಂಪ್ಲೆಕ್ಸ್‍ನಲ್ಲಿ ಹರೀಶ್ ಮಾಲೀಕತ್ವದ ನೂತನವಾಗಿ ಆರಂಭಗೊಂಡಿರುವ ಬೆಂಗಳೂರು ಅಯ್ಯಂಗಾರ್ ಬೇಕರಿ ಅದ್ದೂರಿಯಾಗಿ ಶುಭಾರಂಭಗೊಂಡಿದೆ

ಅಯ್ಯಂಗಾರ್ ಬೇಕರಿ ಶುಭಾರಂಭ ಕಾರ್ಯಕ್ರಮದ ಅಂಗವಾಗಿ ಗಣಹೋಮವನ್ನು ನೆರವೇರಿಸಲಾಯಿತು.

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಬೇಕರಿ ಆರಂಭಗೊಂಡಿರುವುದರಿಂದ ಪರಿಸರದ ಜನರಿಗೆ ಆಕರ್ಷಕ ಬೆಲೆಯಲ್ಲಿ ಒಳ್ಳೆ ಗುಣಮಟ್ಟದ ಬೇಕರಿ ತಿಂಡಿ ತಿನಿಸುಗಳು ದೊರಕಲಿದೆ.ಗ್ರಾಹಕರಿಗಾಗಿ ಧಮಾಕಾ ಆಫರ್ ಬಿಡುಗಡೆ ಮಾಡಿರುವ ಅಯ್ಯಂಗಾರ್ ಬೇಕರಿ ಮಾಲೀಕರು ರೀಯಾತಿ ದರದಲ್ಲಿ ಕೇಕ್ ನೀಡಲಿದ್ದಾರೆ.ಇವೊಂದು ವಿಶೇಷವಾದ ಆಫರ್ 15 ದಿನಗಳ ಕಾಲ ಮುಂದುವರೆಯಲಿದೆ.

ಕೇಕ್ ಹಾಗೂ ಬೇಕರಿ ಉತ್ಪನ್ನಗಳ ಮೂಲಕ ರಾಜ್ಯಾದ್ಯಂತ ಹೆಸರನ್ನು ಗಳಿಸಿರುವ ಬೆಂಗಳೂರು ಅಯ್ಯಂಗಾರ್ ಬೇಕರಿ ಮುಳ್ಳಿಕಟ್ಟೆಯಲ್ಲಿ ಶುಭಾರಂಭ ಗೊಂಡಿರುವುದರಿಂದ ಗ್ರಾಹಕರಿಗೂ ಖುಷಿ ಕೊಟ್ಟಿದೆ.

ಯಾವುದೇ ರೀತಿಯ 1 ಕೆ.ಜಿ ಸ್ವೀಟ್ಸ್, ಬಟರ್ ಬಿಸ್ಕೆಟ್ಸ್, ಮಿಕ್ಸ್‍ಚೆರ್, ಫ್ಲಮ್ ಕೇಕ್, ಫ್ರೂಟ್ ಕೇಕ್ಸ್ ಕೊಂಡಲ್ಲಿ 250 ಗ್ರಾಂ ಉಚಿತವಾಗಿ ದೊರಕಲಿದೆ.

ವೇಚ್ ಪಪ್ಸ್, ಎಗ್ ಪಪ್ಸ್, ಆಲು ಬನ್, ಎಗ್ರೋಲ್, ಬರ್ಗರ್ ಬ್ರೆಡ್, ಟೋಸ್ಟ್, ಸಮೋಸ, ದಿಲ್ ಪಸನ್ ನಾಲ್ಕು ಪೀಸ್ ಕೊಂಡಲ್ಲಿ 1 ಪೀಸ್ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ.ಎಲ್ಲಾ ರೀತಿಯ ಕೇಕ್‍ಗಳು ಆಕರ್ಷಕ ಬೆಲೆಯಲ್ಲಿ ದೊರೆಯಲಿದೆ.


ಮುಳ್ಳಿಕಟ್ಟೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಬೆಂಗಳೂರು ಅಯ್ಯಂಗಾರ್ ಬೇಕರಿ ಮಾಲೀಕರಾದ ಹರೀಶ್ ಮಾತನಾಡಿ, ಆರೋಗ್ಯಕರವಾದ ಹಾಗೂ ರುಚಿಯನ್ನು ಹೊಂದಿರುವ ಬೇಕರಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು.ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ.ಗ್ರಾಹಕರಿಗಾಗಿ ವಿಶೇಷ ರೀತಿಯಲ್ಲಿ ಧಮಾಕ ಆಫರ್‍ನ್ನು ನೀಡಲಾಗಿದ್ದು.ಕೇಕ್ ಮತ್ತು ಬೇಕರಿ ಉತ್ಪನ್ನಗಳನ್ನು ಆಕರ್ಷಕ ಬೆಲೆಯಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.ನಮ್ಮ ಉದ್ಯಮಕ್ಕೆ ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡರು.

ಅಯ್ಯಂಗಾರ್ ಬೇಕರಿ ಶುಭಾರಂಭ ಕಾರ್ಯಕ್ರಮದಲ್ಲಿ ಕುಟುಂಬಸ್ಥರು,ಸ್ನೇಹಿತ ವರ್ಗದವರು, ಹಿತೈಷಿಗಳು, ಗಣ್ಯರು ಭಾಗಿಯಾಗಿ ಶುಭಹಾರೈಸಿದರು.

Related Posts

Leave a Reply

Your email address will not be published.