ಕಾಲ್ತೋಡಿ : ಕಾಲುಸಂಕದಿಂದ ಬಿದ್ದು ಮೃತ ಬಾಲಕಿ ಪೋಷಕರಿಗೆ ಸಂಸದ ರಾಘವೇಂದ್ರ ಸಾಂತ್ವಾನ

ಕುಂದಾಪುರ: ಇತ್ತೀಚೆಗೆ ಕಾಲು ಸಂಕದಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಕಾಲ್ತೋಡು ಬೋಳಂಬಳ್ಳಿಯ ಮೃತ ಬಾಲಕಿ ಸನ್ನಿಧಿ ಪೋಷಕರು ಸಂಸದ ಬಿವೈ ರಾಘವೇಂದ್ರ ಅವರನ್ನು ಕೊಲ್ಲೂರು ಪ್ರವಾಸಿ ಮಂದಿರಲ್ಲಿ ಗುರುವಾರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮೃತ ಬಾಲಕಿಯ ಪೋಷಕರಿಗೆ ಸಾಂತ್ವನ ತಿಳಿಸಿದ ಅವರು, ಸನ್ನಿಧಿ ಪೋಷಕರಾದ ಪ್ರದೀಪ್ ಮತ್ತು ಸುಮಿತ್ರಾ ಅವರಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡಿದರು. ಈ ವೇಳೆ ಶಾಸಕ ಸುಕುಮಾರ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.

Related Posts

Leave a Reply

Your email address will not be published.