ಕುಂದಾಪುರ : ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ
ಬೈಂದೂರು: ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೋಳೂರು ಎಂಬಲ್ಲಿ ಚಿರತೆಯೊಂದು ಆಹಾರ ಹುಡುಕಿಕೊಂಡು ಬಂದು ಮಾಸ್ತಿ ಎಂಬುವವರ ಮನೆಯ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯು ನಾಜೂಕಿನಿಂದ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಾವಿಯಿಂದ ಬೋನಿನೊಳಗೆ ಹಾಕಿ ಮೇಲೆಕ್ಕೆತ್ತಿ ರಕ್ಷಿಸಲಾಗಿದೆ.
ಇದೀಗ ಗುಡ್ಡಿಹೋಟಲ್, ಜಡ್ಡಾಡಿ ಕೋಣ್ಕಿ, ಬಡಾಕೆರೆ ತಾರೀಬೇರುನಲ್ಲಿ ಮುಂತಾದ ಸ್ಥಳದಲ್ಲಿ ಪದೇ ಪದೇ ಜನ ವಾಸ್ತವ ಸ್ಥಳದಲ್ಲಿ ಚಿರತೆಗಳು ಕಾಣಿಸಿಕೊಂಡು ಜನರು ಭಯ ಬೀತವಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ.ಈ ವೇಳೆ ಕಾರ್ಯಚರಣೆಯಲ್ಲಿ ಕುಂದಾಪುರ ವಲಯದ ಅರಣ್ಯಾಧಿಕಾರಿ ಟಿ., ಕಿರಣ್ ಬಾಬು, ಉಪ ವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್, ಸುನಿಲ್ ಕುಂಬಾರ್, ಅರಣ್ಯ ರಕ್ಷಕ ಆನಂದ ಬಳೆಗಾರ ರಮೇಶ ಮಂಜುನಾಥ ಗಾಣಿಗ ಮತ್ತು ಗ್ರಾಮಸ್ಥರು ಮುಂತಾದವರು ಹಾಜರಿದ್ದರು.