ಕುಂದಾಪುರ : ದುಬೈನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ

ದುಬೈನಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ವಂಚಿಸಿದ ಘಟನೆ ಬೈಂದೂರಿನಲ್ಲಿ ನಡೆದಿದೆ. ಬೈಂದೂರು ತಾಲೂಕಿನ ಶಿರೂರಿನ ಸಂದೀಪ್ ಶೆಟ್ಟಿ ಯುವಕರಿಗೆ ವಂಚಿಸಿದ ವ್ಯಕ್ತಿ. ಯುವಕರಿಂದ ಕೋಟ್ಯಂತರ ರೂಪಾಯಿ ಸಾಲ ಮಾಡಿಸುತ್ತಾನೆ, ಇಲ್ಲಿ ಇವನದೇ ಆದ ದೊಡ್ಡ ತಂಡ ಇದೆ. ಇವರಲ್ಲಿ ಹೆಚ್ಚಿನವರು ಪಾಕಿಸ್ತಾನದವರು, ಮೊದಲು ಬ್ಯಾಂಕ್ ಅಕೌಂಟ್ ಓಪನ್ ಮಾಡಿಸುತ್ತಾರೆ, ಆಮೇಲೆ ನಮ್ಮ ಹೆಸರಿನಲ್ಲಿ ಲೋನ್ ತೆಗಿಯುತ್ತಾರೆ, ನಂತರ ಯುಕರಿಗೆ ಅಲ್ಪ ಸ್ವಲ್ಪ ಮೊತ್ತ ನೀಡಿ ಭಾರತಕ್ಕೆ ಕಳಿಸುತ್ತಾರೆ, ಇದನ್ನು ವಿರೋಧಿಸಿದರೆ ತುಂಬಾ ಕಷ್ಟ ಕೊಡುತ್ತಾರೆ.

ಮದ್ದೋಡಿಯ ನಿತಿನ್ ಶೆಟ್ಟಿ ಎಂಬವರು ಕೂಡ ವಂಚನೆಗೆ ಬಲಿಯಾಗಿದ್ದಾರೆ. ಈಗಾಗಲೇ ವಂಚಿಸುವವರ ವಿರುದ್ದ ದುಬೈ ಕನ್ನಡ ಸಂಘಕ್ಕೆ ದೂರನ್ನು ನೀಡಿದ್ದು ಸಹಕಾರದ ಭರವಸೆ ನೀಡಿದ್ದಾರೆ. ಉಡುಪಿ, ಮಂಗಳೂರು ಜಿಲ್ಲೆಯ ಎಲ್ಲರು ದಯವಿಟ್ಟು ಜಾಗ್ರತೆ ವಹಿಸಿ ಎಂದು ವಂಚನೆಗೆ ಒಳಗಾದ ಯುವಕರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮುಖಾಂತರ ತಿಳಿಸಿದ್ದಾರೆ.