ಕುಂದಾಪುರ: ಗಾಳ ಹಾಕಿ ಮೀನು ಹಿಡಿದ ಖ್ಯಾತ ನಟ ರಿಷಬ್ ಶೆಟ್ಟಿ
ಕುಂದಾಪುರ:ಕಾಂತಾರ ಸಿನೆಮಾದ ಮೂಲಕ ಮನೆ ಮಾತಾಗಿರುವ ಜನಪ್ರಿಯ ನಟ ರಿಷಬ್ ಶೆಟ್ಟಿ ಅವರು ಕುಂದಾಪುರ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವುದರ ಮುಖೇನ ಗಮನ ಸೆಳೆದಿದ್ದಾರೆ.
ಕುರುಡಿ,ಕೆಂಬೇರಿ,ಕಲ್ಲ್ ಪೊಟರಿ,ಹೊಳೆ ಬೈಗಿ ಸೇರಿದಂತೆ ಇನ್ನಿತರ ಜಾತಿಯ ಮೀನುಗಳು ಅವರ ಗಾಳಕ್ಕೆ ಬಿದ್ದಿದ್ದು. ಗಾಳ ಹಾಕಿ ಮೀನು ಹಿಡಿಯುವುದರಲ್ಲಿಯೂ ಪಂಟರ್ ಎನಿಸಿಕೊಂಡಿದ್ದಾರೆ.
ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದರ ಮುಖೇನ ಗ್ರಾಮೀಣ ಬದುಕನ್ನು ಆಸ್ವಾಧಿಸುವುದರ ಮೂಲಕ ತಾನೊಬ್ಬ ಶ್ರೇಷ್ಟ ನಟ ಎನ್ನುವ ಜಂಬವಿಲ್ಲದೆ ಸಾಮಾನ್ಯ ಸಾಮಾನ್ಯರಂತೆ ಮಳೆ ಕೊಟು ಧರಿಸಿ ಮೀನು ಹಿಡಿಯುತ್ತಿರುವುದು ವಿಶೇಷ ಸಂಗತಿ.ಇತ್ತೀಚೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದ ಖುಷಿಯಲ್ಲಿರುವ ಕಾಂತಾರ ರಿಷಬ್ ಶೆಟ್ಟಿ ಅವರು ತಮ್ಮ ವಿಭಿನ್ನ ರೀತಿಯ ಚಟುವಟಿಕೆ ಮೂಲಕ ಖುಷಿಯ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ.