ಕುಂದಾಪುರ : ಸೌಪರ್ಣಿಕ ನದಿಯ ನೀರಿನ ಮಟ್ಟ ಹೆಚ್ಚಳ

ಕುಂದಾಪುರ: ಎರಡು ಮೂರು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದ ಸೌಪರ್ಣಿಕ ನದಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನದಿಯ ಸಮೀಪದಲ್ಲಿರುವ ಊರುಗಳಾದ ಸಾಲ್ಬುಡ-ನಾವುಂದ ಬಡಾಕೆರೆ, ಮರವಂತೆ, ಚಿಕ್ಕಳ್ಳಿ, ಪಡುಕೋಣೆ, ಅರೆಹೊಳೆ ಮುಂತಾದ ಪ್ರದೇಶಗಳು ಮುಳುಗಡೆ ಭೀತಿಯಲ್ಲಿದೆ.

ಅಲ್ಲದೆ ಸಾವಿರಾರು ಎಕರೆ ಕೃಷಿ ಭೂಮಿಗಳು ನೆರೆಯಿಂದ ಸಂಪೂರ್ಣ ಜಲಾವೃತವಾಗಿದೆ. ಕುಡಿಯುವ ನೀರಿಗೆ ಜನರ ಆಹಾಕಾರ ಉಂಟಾಗಿದೆ. ನೆರೆ ನೀರು ಜೊತೆ ಕೆಲವೊಂದು ಹಾವುಗಳು ಮನೆ ಒಳಗೆ ನುಗ್ಗುತ್ತಿದೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
