ಕೆವಿಜಿ ಪಾಲಿಟೆಕ್ನಿಕ್ : ನಿವೃತ್ತರಿಗೆ ಬೀಳ್ಕೊಡುಗೆ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಎಪ್ರಿಲ್ 30 ರಂದು ವಯೋ ನಿವೃತ್ತಿ ಹೊಂದಿದ ಇಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಮನೋಹರ ಇವರ ಬೀಳ್ಕೊಡುಗೆ ಸಮಾರಂಭವು ಪ್ರಾಂಶುಪಾಲರ ಕಛೇರಿಯಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಸಭೆಯ ಅಧ್ಯಕ್ಷತೆ ವಹಿಸಿ ನಿವ್ರತ್ತರನ್ನು ಸನ್ಮಾನಿಸಿದರು. ಅಧೀಕ್ಷಕ ಧನಂಜಯ ಕಲ್ಲುಗದ್ದೆ ಹಾಗೂ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥೆ ರಮಾದೇವಿ ಅಭಿನಂದನಾ ಭಾಷಣ ಮಾಡಿದರು. ಸಮಾರಂಭದಲ್ಲಿ ಉಪಪ್ರಾಂಶುಪಾಲ ಹರೀಶ್ ಕುಮಾರ್, ವಿಭಾಗ ಮುಖ್ಯಸ್ಥರುಗಳಾದ ಎಂ.ಎನ್.ಚಂದ್ರಶೇಖರ್, ಯತೀಶ್ ಕೆ.ಎನ್, ವಿವೇಕ್ ಪಿ, ರವಿಶಂಕರ ಹೊಳ್ಳ, ಬಿಂದು ಕೆ.ವಿ. ಅಧೀಕ್ಷಕರಾದ ಶಿವರಾಮ ಕೇರ್ಪಳ, ಇಲೆಕ್ಟ್ರಾನಿಕ್ಸ್ ವಿಭಾಗದ ಸಿಬ್ಬಂದಿಗಳು ಹಾಗೂ ನಿವ್ರತ್ತಿ ಹೊಂದಿದ ಮನೋಹರ್ ರವರ ಪತ್ನಿ ಪ್ರಭಾವತಿ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದ ವತಿಯಿಂದಲೂ ಸನ್ಮಾನ ನಡೆಯಿತು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಕಾರ್ಯಕ್ರಮ ನಿರೂಪಿಸಿದರು.