ಕೋಸ್ಟಲ್‌ವುಡ್‌ನಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿರುವ ಲಂಚುಲಾಲ್ ಕೆ.ಎಸ್.

ತುಳು ಸಿನಿಮಾ ರಂಗದಲ್ಲಿ ಹೊಸತನ ತರಲು ಅಸ್ತ್ರಗ್ರೂಪ್‌ನ ಲಂಚುಲಾಲ್ ಕೆ.ಎಸ್. ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ.
ಈಗಾಗಲೇ ಕೋಸ್ಟಲ್‌ವುಡ್‌ನಲ್ಲಿ ಮೀರಾ ಸೇರಿದಂತೆ ಹಲವಾರು ಸಿನಿಮಾಗಳಿಗೆ ಬಂಡವಾಳ ಹೂಡಿ ವಿಶೇಷ ಮತ್ತು ವಿಭಿನ್ನ ಶೈಲಿಯ ಸಿನಿಮಾಗಳನ್ನು ತೆರೆಗೆ ತರಲು ಅಸ್ತ್ರಗ್ರೂಪ್‌ನ ಸಿಇಒ ಲಂಚುಲಾಲ್ ಅವರು ಸಜ್ಜಾಗುತ್ತಿದ್ದಾರೆ.. ಮೀರಾ ಸಿನಿಮಾ ಬಿಡುಗಡೆಗೊಂಡು ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿದೆ.. ಇದೀಗ ಕೋಸ್ಟಲ್‌ವುಡ್‌ನಲ್ಲಿ ಸಿನಿಮಾಗಳಿಗೆ ಹೊಸ ರೂಪ ತರಲು ಸಜ್ಜಾಗಿದ್ದು, ಹಲವಾರು ವಿಭಿನ್ನ ಶೈಲಿಯ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಕ್ಯಾಟ್ಕಾ ಅಧ್ಯಕ್ಷರಾದ ಬಳಿಕ ಯುವ ನಿರ್ದೇಶಕರನ್ನು ಮತ್ತು ಯುವ ನಟ ನಟಿಯರನ್ನು ಪ್ರೋತ್ಸಾಹಿಸಿ ಆ ಮೂಲಕ ತುಳು ಸಿನಿಮಾ ಕ್ಷೇತ್ರದಲ್ಲಿಯೇ ಮೈಲಿಗಲ್ಲನ್ನು ಸಾಧಿಸುವಲ್ಲಿಯೂ ಯಶಸ್ವಿಯಾಗುತ್ತಿದ್ದಾರೆ.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ವಿಶೇಷ ಕಾಳಜಿ ಮತ್ತು ಕೊಡುಗೆಗಳನ್ನು ನೀಡುತ್ತಿರುವ ಅಸ್ತ್ರಗ್ರೂಪ್‌ನ ಸಿಇಒ ಲಂಚುಲಾಲ್ ಕೆ.ಎಸ್. ಅವರು ತುಳು ಇಂಡಸ್ಟ್ರೀಯಲ್ಲೂ ಹೊಸ ರೂಪವನ್ನು ತರಲು ಹೆಜ್ಜೆಯನ್ನಿಟ್ಟಿದ್ದಾರೆ. ಕೋಸ್ಟಲ್‌ವುಡ್‌ನಲ್ಲಿ ಈಗಾಗಲೇ ಹಲವಾರು ಸಿನಿಮಾಗಳನ್ನು ನಿರ್ಮಿಸಿರುವುದಲ್ಲದೆ, ಹೊಸ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ಹೊಸತನ ತರಲು ಮುಂದಡಿಯಿಟ್ಟಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ.