ಲಯನ್ ಸೇವಾ ಸಂಸ್ಥೆಯ ಪ್ರಾಂತೀಯ ಸಮ್ಮೇಳನ ‘ಧನ್ಯ’ : ಕಂದೂರಿನಲ್ಲಿರುವ ಬಜಾರ್ ಅಡಿಟೋರಿಯಂನಲ್ಲಿ ಕಾರ್ಯಕ್ರಮ

ಬಂಟ್ವಾಳ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಇದರ ಪ್ರಾಂತೀಯ ಸಮ್ಮೇಳನ “ಧನ್ಯ” ನ. 26ರಂದು ಸಜೀಪಮೂಡದ ಕಂದೂರಿನಲ್ಲಿರುವ ಬಜಾರ್ ಆಡಿಟೋರಿಯಂನಲ್ಲಿ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಬಂಟ್ವಾಳದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ನಡೆಯಿತು.
ಲಯನ್ಸ್ ಮಲ್ಟಿಪಲ್ ಕೌನ್ಸಿಲ್‍ನ ಚೆಯರ್‍ಪರ್ಸನ್ ವಸಂತ್ ಕುಮಾರ್ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಅವರ ನೇತೃತ್ವದಲ್ಲಿ ಧನ್ಯ ಎನ್ನುವ ಪ್ರಾಂತೀಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಚಾರ. ಸೇವೆಯಲ್ಲಿ ಧನ್ಯತೆಯನ್ನು ಕಾಣುವ ಆಶಯದೊಂದಿಗೆ ಈ ಸಮ್ಮೇಳನ ನಡೆಯಲಿದ್ದು ಸಮ್ಮೇಳನ ಯಶಸ್ವಿಯಾಗಲಿ, ಸೇವೆಯ ಧನ್ಯತೆ ಎಲ್ಲರಿಗೂ ಸಿಗಲಿ ಎಂದು ಶುಭ ಹಾರೈಸಿದರು.

ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಡಾ. ವಸಂತ್ ಕುಮಾರ್ ಬಾಳಿಗ ಮಾತನಾಡಿ ಬಂಟ್ವಾಳ ಲಯನ್ಸ್ ಕ್ಲಬ್‍ನ ಮುಂದಾಳತ್ವದಲ್ಲಿ ನಡೆಯುವ ಪ್ರಾಂತೀಯ ಸಮ್ಮೇಳನ ಆದರ್ಶ ಸಮ್ಮೆಳನವಾಗಿ ಮೂಡಿ ಬರಲಿ ಎಂದು ಶುಭ ಕೋರಿದರು.ಸಮ್ಮೆಳನಾಧ್ಯಕ್ಷ ಮನೋರಂಜನ್ ಕೆ. ಆರ್ ಶುಭ ಕೋರಿದರು. ಪ್ರಾಂತೀಯ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಅಗ್ರಬೈಲು ಮಾತನಾಡಿ ಪ್ರಾಂತೀಯ ಸಮ್ಮೆಳನ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಿ ಮುನ್ನಡೆಯುತ್ತಿದೆ. ಅತ್ಯಂತ ವಿಶಿಷ್ಠ ರೀತಿಯಲ್ಲಿ ನಡೆಯುವ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ಈ ಸಂದರ್ಭ ಪ್ರಾಂತೀಯ ಸಮ್ಮೇಳನ ಸಮಿತಿಯ ಕಾರ್ಯದರ್ಶಿ ತಪೋಧನ್ ಶೆಟ್ಟಿ, ಕೋಶಾಧಿಕಾರಿ ಉಮೇಶ್ ಸಾಲ್ಯಾನ್, ಪ್ರಧಾನ ಸಂಯೋಜಕ ಶ್ರೀನಿವಾಸ ಪೂಜಾರಿ ಮೆಲ್ಕಾರ್, ವಲಾಯಾಧ್ಯಕ್ಷರಾದ ರಮಾನಂದ ಎನ್., ವಿಜಯ ರೈ ಕೆ., ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಉಮೇಶ್ ಆಚಾರ್, ಕಾರ್ಯದರ್ಶಿ ಬಿ. ಶಿವಾನಂದ ಬಾಳಿಗ. ಕೋಶಾಧಿಕಾರಿ ಜಗದೀಶ್ ಬಿ.ಎಸ್. ಪ್ರಮುಖರಾದ ದಾಮೋದರ ಬಿ.ಎಂ. ಪುಷ್ಪರಾಜ ಶೆಟ್ಟಿ, ಪ್ರತಿಭಾ ಬಿ. ಶೆಟ್ಟಿ, ಬಿ. ಸತ್ಯನಾರಾಯಣ ರಾವ್, ಮದ್ವರಾಜ್ ಕಲ್ಮಾಡಿ, ಸಂತೋಷ್ ಡಿಸೋಜಾ, ಪ್ರಶಾಂತ್ ಕೋಟ್ಯಾನ್, ದೇವಿಕಾ ದಾಮೋದರ್, ಹೆನ್ರಿ ಡಿಸೋಜಾ, ಜಯಂತ್ ಶೆಟ್ಟಿ, ಸುನೀಲ್ ಬಿ., ಡಾ. ಧೀರಜ್, ಉಮೇಶ್ ಪಿ. ಮೊದಲಾದವರು ಉಪಸ್ಥಿತರಿದ್ದರು.