ಲೈಪೋಮಾ

ಲೈಪೋಮಾ ಎನ್ನುವುದು ಕೊಬ್ಬಿನ ಜೀವಕೋಶಗಳ ಗಡ್ಡೆಯಾಗಿದ್ದು ಚರ್ಮದ ಮತ್ತು ಚರ್ಮದ ಕೆಳಗಿನ ಪದರದ ನಡುವೆ ಬೆಳೆಯುತ್ತದೆ. ಬಹಳ ನಿಧಾನವಾಗಿ ಬೆಳೆಯುವ ನಿರುಪದ್ರವಿ ಕ್ಯಾನ್ಸರ್ ಅಲ್ಲದ ಗಡ್ಡೆ ಇದಾಗಿದ್ದು ಜನರು ನೋವಿಲ್ಲದ ಕಾರಣ ಹಚ್ಚು ತಲೆಕೆಡಿಸುವ ಗೋಜಿಗೆ ಹೋಗುವುದಿಲ್ಲ. ಮುಟ್ಟಲು ಗಟ್ಟಿಯಾಗಿರದೆ ಬಹಳ ಮೆದುವಾಗಿರುತ್ತದೆ. ಹಾಗೂ ಚರ್ಮದ ಪದರಗಳ ನಡುವೆ ಚಲಿಸುವಂತೆ ಬಾಸವಾಗುತ್ತದೆ. ಒಬ್ಬರಿಗೆ ಒಂದಕ್ಕಿAತ ಹೆಚ್ಚು ಲೈಪೋಮಾ ಇರುವ ಸಾಧ್ಯತೆ ಇರುತ್ತದೆ. ಹೆಚ್ಚಾಗಿ ಕುತ್ತಿಗೆ, ಭುಜ, ಬೆನ್ನು, ಹೊಟ್ಟೆ, ಕೈ, ಮುಖ ಮತ್ತು ತೊಡೆಯ ಭಾಗದಲ್ಲಿ ಕಂಡುಬರುತ್ತದೆ. ಭಾರತ ದೇಶದವರಲ್ಲಿಯೇ ವಾರ್ಷಿಕವಾಗಿ ಹತ್ತು ಮಿಲಿಯನ್ ಮಂದಿ ಲೈಪೋಮಕ್ಕೆ ತುತ್ತಾಗುತ್ತಾರೆ. ಬಹಳ ಸುಲಭವಾಗಿ ಪತ್ತೆಹಚ್ಚಬಹುದಾದ, ಗುರುತಿಸಬಹುದಾದ ಹಾಗೂ ಚಿಕಿತ್ಸೆಗೆ ಸ್ಪಂದಿಸುವ ಗಡ್ಡೆ ಇದಾಗಿದ್ದು, ಚಿಕಿತ್ಸೆ ನೀಡದೆ ಇದ್ದರೂ ವರ್ಷನುಗಟ್ಟಲೆ ಹಾಗೇ ಇರುತ್ತದೆ. ಯಾವುದೇ ನಿರ್ಧಿಷ್ಟ ಕಾರಣವಿಲ್ಲದೆ ಹುಟ್ಟಿಕೊಳ್ಳುವ ಈ ಗಡ್ಡೆಗಳು ವಂಶಪಾರಂಪರ್ಯವಾಗಿ ಬರುವ ಸಾದ್ಯತೆ ಇರುತ್ತದೆ. ಚಿಕಿತ್ಸೆ ನೀಡದಿದ್ದರೆ ಜೀವನವಿಡೀ ಇರುತ್ತದೆ. ಸರ್ಜರಿ ಈ ಗಡ್ಡೆಗೆ ಪ್ರಥಮ ಚಿಕಿತ್ಸೆಯಾಗಿದ್ದು, ಬಹಳ ಚೆನ್ನಾಗಿ ಸರ್ಜರಿಗೆ ಸ್ಪಂದಿಸುತ್ತದೆ. ಕೇವಲ ಎರಡು ಶೇಕಡಾ ಲೈಪೋಮಾಗಳು ಲೈಪೋ ಸಾರ್ಕೋಮಾ ಎಂಬ ಕ್ಯಾನ್ಸರ್‌ಗೆ ಬದಲಾಗುವ ಸಾಧ್ಯತೆ ಇದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಒಟ್ಟಿನಲ್ಲಿ ಮಾರಣಾಂತಿಕವಲ್ಲದ ನೋವಿಲ್ಲದ ದೂರದ ಅಂಗಾಂಶಗಳಿಗೆ ಹರಡದ ಬಹಳ ನಿರುಪದ್ರವಿ ಗಡ್ಡೆ ಇದಾಗಿದ್ದು ಜನರು ಹೆಚ್ಚು ತಲೆಗೆ ಹಚ್ಚಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ವೈದ್ಯರ ಒಕ್ಕೊರಲಿನ ಅಭಿಪ್ರಾಯ ೪೦ ರಿಂದ ೬೦ ರ ವಯಸ್ಸಿನಲ್ಲಿ ಹೆಚ್ಚು ಕಂಡುಬರುತ್ತದೆ. ಪ್ರತೀ ಸಾವಿರದಲ್ಲಿ ಒಬ್ಬರು ಈ ಲೈಪೋಮಾ ಗಡ್ಡೆ ಪಡೆಯಬಹುದು ಎಂದು ತಿಳಿದು ಬಂದಿದೆ. ಸಣ್ಣ ಮಕ್ಕಳಲ್ಲಿ ಹುಟ್ಟಿದಾಗಲೇ ಇರುವ ಸಾಧ್ಯತೆ ಇದೆ. ಎಲ್ಲಾ ಜಾತಿ ಮತ ಧರ್ಮದ ಜನರಲ್ಲಿ ಕಂಡುಬರುತ್ತದೆ. ಆದರೆ ಮಹಿಳೆಯರಲ್ಲಿ ಪುರುಷರಿಗಿಂತ ೫ ಶೇಕಡಾ ಜಾಸ್ತಿ ಬರುವ ಸಾಧ್ಯತೆ ಇದೆ.ದುಂಡಾಗಿ, ಮೆತ್ತಗೆ ಇರುವ ಈ ಗಡ್ಡೆಯ ಸುತ್ತ ಕವಚ ಇರುವ, ಕಾರಣ ಈ ಗಡ್ಡೆ ಇತರ ಕಡೆಗೆ ಹರಡುವ ಸಾಧ್ಯತೆ ಕಡಿಮೆ ಇರುತ್ತದೆ

lipoma


.
ಪತ್ತೆ ಹಚ್ಚುವುದು ಹೇಗೆ?

ನುರಿತ ವೈದ್ಯರು ದೈಹಿಕ ಪರೀಕ್ಷೆ ಸಮಯದಲ್ಲಿ ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಯಾವುದೇ ಬಯಾಸ್ಪಿ ಅಗತ್ಯವಿಲ್ಲ. ಅತಿ ಹೆಚ್ಚು ವೆಚ್ಚದ ಸಿಟಿಸ್ಕಾö್ಯನ್, ಯಮ್ ಆರ್ ಐ ಸ್ಕಾö್ಯನ್ ಅಗತ್ಯವಿಲ್ಲ. ಆದರೆ ಹತ್ತಿರದ ರಕ್ತನಾಳಗಳ ಬಗೆಗಿನ ಮಾಹಿತಿ ತಿಳಿಯಲು ಅಲ್ಟಾç ಸೌಂಡ್ ಸ್ಕಾö್ಯನ್ ಮಾಡಿಸಲು ವೈದ್ಯರು ಸೂಚಿಸುತ್ತಾರೆ. ಕೆಲವೊಂದು ರೋಗ ಸಮುಚ್ಚಯ ಸಿಂಡ್ರೋಮ್‌ಗಳಲ್ಲಿ ದೇಹದೆಲ್ಲೆಡೆ ಹಲವಾರು ಲೈಪೋಮಾಗಳು ಕೈ, ಕಾಲು, ಬೆನ್ನು, ತೊಡೆ, ಹೊಟ್ಟೆ ಭಾಗದಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಆಂರ‍್ಸ್ ಸಿಂಡ್ರೋಮ್ (ಎಡಿಪೋಸಿಸ್ ಟೋಲರೋಸಾ) ಹಾರ್ಡನ್‌ರ್ ಸಿಂಡ್ರೋಮ್ ಇತ್ಯಾದಿ. ಇನ್ನು ಪುರುಷರಲ್ಲಿ ಅತಿಯಾಗಿ ಮದ್ಯಪಾನ ಮಾಡುವವರಲ್ಲಿ, ಕುತ್ತಿಗೆ ಮತ್ತು ಭುಜದ ಸುತ್ತ ಹತ್ತಾರು ಲೈಪೋಮಾಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಇದನ್ನು ಮಲ್ಟಿಪಲ್ ಸಿಸ್ಟೆಮಿಕ್ ಲೈಪಮಟೋಸಿಸ್ ಎಂದು ಕರೆಯಲಾಗುತ್ತದೆ. ಇನ್ನು ಅನುವಂಶಿಕವಾಗಿ ಹೆತ್ತವರಿಂದ ಮಕ್ಕಳಿಗೆ ಬಳುವಳಿಯಾಗಿ ಲೈಪೋಮಾ ಬರುತ್ತದೆ. ಅದನ್ನು ಹೆರಿಡಿಟರಿ ಮಲ್ಟಿಪಲ್ ಲೈಪಮಟೋಸಿಸ್ ಎಂದು ಸಂಭೋದಿಸಲಾಗುತ್ತದೆ.

ಚಿಕಿತ್ಸೆ ಹೇಗೆ?

ಸಣ್ಣಗಾತ್ರದ ಲೈಪೋಮಾಗಳಿಗೆ ಚಿಕಿತ್ಸೆ ಅಗತ್ಯವಿಲ್ಲ ನಿರಂತರ ವೈದ್ಯಕೀಯ ಸಮಾಲೋಚನೆ ಮತ್ತು ಲೈಪೋಮಾದ ಗಾತ್ರದ ಬಗ್ಗೆ ಗಮನವಿಟ್ಟರೆ ಸಾಕು ಯಾವಾಗ ಲೈಪೋಮಾದ ಗಾತ್ರ ಹಿಗ್ಗಿಕೊಂಡು ನೋಡಲು ಅಸಹ್ಯವಾಗಿ ಕಾಣುತ್ತದೋ, ಆವಾಗ ಸರ್ಜರಿ ಮುಖಾಂತರ ಈ ಲೈಪೋಮಾವನ್ನು ಕಿತ್ತು ತೆಗೆಯಲಾಗುತ್ತದೆ. ಇನ್ನು ಕೆಲವೊಮ್ಮೆ ಆಯಕಟ್ಟಿನ ಜಾಗಗಳಲ್ಲಿ ಲೈಪೋಮಾ ಬೆಳೆದು ವ್ಯಕ್ತಿಯ ದೈನಂದಿನ ಕೆಲಸಕರ‍್ಯಗಳಿಗೆ ತೊಡಕು ಮಾಡಿದಲ್ಲಿ ಸರ್ಜರಿ ಅವಶ್ಯಕ. ಸರ್ಜರಿ ಹೊರತಾದ ಬೇರೆ ಚಿಕಿತ್ಸೆ ಇಲ್ಲ. ಔಷಧಿಯಿಂದ ಅಥವಾ ಇನ್ನಾವುದೋ ಕಷಾಯ ಮಾಟ ಮಂತ್ರಗಳ ಮೊರೆ ಹೋಗುವುದು ಮೂರ್ಖತನದ ಪರಮಾವದಿ. ಹೆಚ್ಚಿನ ಸಂದರ್ಭಗಳಲ್ಲಿ ಜನರು ಲೈಪೋಮಾದ ಜೊತೆ ಬದುಕಲು ಕಲಿಯುತ್ತಾರೆ. ಒಮ್ಮೆ ಸರ್ಜರಿ ಮಾಡಿದ ಬಳಿಕ ಮಗದೊಮ್ಮೆ ಬೆಳೆಯುವ ಸಾಧ್ಯತೆ ಬಹಳ ಕಡಿಮೆ. ಆದರೆ ಇನ್ನೊಂದು ಜಾಗದಲ್ಲಿ ಲೈಪೋಮಾ ಬೆಳೆಯುವ ಸಾಧ್ಯತೆ ಇರುತ್ತದೆ. ಬಹಳ ನಿಧಾನವಾಗಿ ಬೆಳೆಯುವ ಗಡ್ಡೆ ಇದಾಗಿರುವ ಕಾರಣ ಜನರು ಇದರ ಗೋಜಿಗೆ ಹೋಗುವುದಿಲ್ಲ.

ಕೊನೆ ಮಾತು:

ಬಹಳ ನಿರುಪದ್ರವಿ, ನೋವಿಲ್ಲದ ಮೃದುವಾದ ದುಂಡಗಾದ ಈ ಲೈಪೋಮಾಗಳು ಒಂದು ರೀತಿಯಲ್ಲಿ ಹತ್ತರಲ್ಲಿ ಹನ್ನೊಂದರಂತೆ ಇರುತ್ತದೆ. ಲೆಕ್ಕಕ್ಕುಂಟು ಆದರೆ ಆಟಕ್ಕಿಲ್ಲ ರೀತಿಯ ನಿರುಪದ್ರವಿರೋಗವಿದು. ಆದರೆ ಕೆಲವೊಮ್ಮೆ ಈ ಗಡ್ಡೆಗಳು ವೇಗವಾಗಿ ಬೆಳೆದಾಗ ನೋವು ಉಂಟಾಗಲು ಆರಂಭಿಸಿದಾಗ ಅಥವಾ ಗಡ್ಡೆಗಳು ಗಟ್ಟಿಯಾಗಿ ಕೆಳಗಿನ ಭಾಗಗಳಿಗೆ ಅಂಟಿಕೊಂಡು ಚಲನೆ ಇಲ್ಲದಾಗ ವೈದ್ಯರನ್ನು ತಕ್ಷಣವೇ ಕಾಣಬೇಕು. ಎರಡು ಶೇಕಡಾ ಲೈಪೋಮಾಗಳು ಲೈಪೋಸಾರ್ಕೋಮಾ ಎಂಬ ಕ್ಯಾನ್ಸರ್ ಆಗಿರುವ ಸಾಧ್ಯತೆ ಇರುವ ಕಾರಣ, ನಿರಂತರ ವೈದ್ಯರ ಬೇಟಿ ಮತ್ತು ಪರೀಕ್ಷೆ ಅಗತ್ಯ ಎಂದು ಜನರು ಅರಿತುಕೊಳ್ಳಬೇಕು.

Related Posts

Leave a Reply

Your email address will not be published.