ಕಾರ್ಕಳ: ಚಂದ್ರ ಗ್ರಹಣ ಭಾಗಶಃ ಗೋಚರ

ಕಾರ್ಕಳ: ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಚಂದ್ರ ಗ್ರಹಣದ ಭಾಗಶಃ ಗೋಚರವಾಯಿತು . ಚಂದ್ರಗ್ರಹಣ ಮೋಕ್ಷಕಾಲದ ಬಳಿಕ ಕಾರ್ಕಳದ ಪ್ರಮುಖ ದೇವಾಲಯಗಳಲ್ಲಿಗರ್ಭಗುಡಿ ಸ್ವಚ್ಚ ಗೊಳಿಸಿ ಪೂಜಾ ವಿಧಿವಿಧಾನಗಳು ನಡೆದವು. ಕಾರ್ಕಳ ತಾಲೂಕಿನ ಪ್ರಸಿದ್ದ ವೆಂಕಟರಮಣ ದೇವಾಲಯ , ಅನಂತ ಶಯನ ದೇವಾಲಯ, ಮುಖ್ಯಪ್ರಾಣ ದೇವಾಲಯ, ಹಿರ್ಗಾನ ಮಹಾಲಕ್ಷ್ಮಿ ದೇವಸ್ಥಾನ , ಹೆಬ್ರಿಯ ಅನಂತ ಪದ್ಮನಾಭ ದೇವಾಲಯ , ಅಜೆಕಾರು ವಿಷ್ಣುಮೂರ್ತಿ ದೇವಾಲಯಗಳಲ್ಲಿ ಸ್ವಚ್ಚತಾ ಕಾರ್ಯಗಳು ನಡೆದು ದೇವರಿಗೆ ಪೂಜಾ ಕೈಂಕರ್ಯ ಗಳು ನಡೆದವು . ಕಾರ್ಕಳ ತಾಲೂಕಿನ ಕೆರುವಾಶೆ ಕಡ್ತಲ ಗಳಲ್ಲಿ ಮೋಡ ಮುಸುಕಿದ್ದ ಕಾರಣ ಚಂದ್ರ ಗ್ರಹಣ ಗೋಚರಿಸಲಿಲ್ಲ‌.

Related Posts

Leave a Reply

Your email address will not be published.