ಮಹತಿ ಎಂಟರ್ ಪ್ರೈಸಸ್ ಅವರ ಪವರ್ ಟ್ರೋನಿಕ್ ಸಿಸ್ಟಮ್ಸ್ ಸೋಲಾರ್ – ಯುಪಿಎಸ್ ಸೊಲ್ಯೂಷನ್ ಸಂಸ್ಥೆ ಶುಭಾರಂಭ

ಕಳೆದ ಮೂವತ್ತು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಆರಂಭಗೊಂಡು ಹೆಸರುವಾಸಿಯಾದ ಮಹತಿ ಎಂಟರ್ ಪ್ರೈಸಸ್ ರವರ ಪವರ್ ಟ್ರೋನಿಕ್ ಸಿಸ್ಟಮ್ಸ್ ಸೊಲಾರ್ ಹಾಗೂ ಯುಪಿಎಸ್ ಸೊಲೂಷನ್ ಸಂಸ್ಥೆಯೂ ಉಡುಪಿಯಲ್ಲಿ ಶುಭಾರಂಭಗೊಂಡಿತು.

ಉಡುಪಿಯ ಕಿನ್ನಿಮುಲ್ಕಿ ಸ್ವಾಗತಗೋಪುರ ಬಳಿಯ ವಾಸುದೇವ ಬಿಲ್ಡಿಂಗ್‌ನಲ್ಲಿ ಪೇಜಾವರ ಮಠದ ಪರಮಪೂಜ್ಯ ಶ್ರೀಪಾದರಾದ ವಿಶ್ವ ಪ್ರಸನ್ನ ಶ್ರೀಗಳು ದೀಪ ಬೆಳಗಿಸುವುದರ ಮೂಲಕ ಲೋಕಾರ್ಪಣೆಗೊಳಿಸಿದರು. ಬಳಿಕ ಸಂಸ್ಥೆಯ ಏಳಿಗೆಗಾಗಿ ಶ್ರೀಗಳು ಆಶೀರ್ವಚಿಸಿ ಶುಭ ಹಾರೈಸಿದರು.

ಉಡುಪಿ ವಿಧಾನ ಸಭೆ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ, ನಗರಸಭೆ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ ಮತ್ತಿತರರು ನೂತನ ಮಳಿಗೆ ಯಶಸ್ಸಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ಅಭಿಷೇಕ್ ರಾವ್ ಅವರು ಮಾತನಾಡಿ, 1994ರಲ್ಲಿ ಅರಂಭಗೊಂಡ ಸಂಸ್ಥೆ ಮೂವತ್ತು ವರ್ಷಗಳಿಂದ ನಿರಂತರವಾಗಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಾ ಬಂದಿದೆ. ಇಂದು ಸಂಸ್ಥೆ ಉಡುಪಿಯಲ್ಲಿ ಅಧಿಕೃವಾಗಿ ಶಾಖೆಯನ್ನು ಪ್ರರಾಂಭಿಸಿದೆ, ನೂತನ ಸಂಸ್ಥೆ ಆರಂಭಗೊಂಡ ಸುಸಂಧರ್ಭದಲ್ಲಿ ಗ್ರಾಹಕರಿಗಾಗಿ ಅಕರ್ಷಕ ಅಫರ್ ಗಳನ್ನು ನೀಡಲು ಮುಂದಾಗಿದೆ.

ಬ್ಯಾಟರಿ ಹಾಗೂ ಇನವರ್ಟರ್, ಸೊಲಾರ್ ಹೀಟರ್ ಹಾಗೂ ಸೊಲಾರ್ ಚೆಕ್ ಅಪ್ ಸರ್ವೀಸ್‌ಗಳ ಜೊತೆಗೆ ಬೃಹತ್ ಎಕ್ಸ್‌ಚೇಂಜ್ ಅಫರ್‌ಗಳನ್ನು ಪವರ್ ಟ್ರೋನಿಕ್ ಸಿಸ್ಟಮ್ ಸಂಸ್ಥೆ ಗ್ರಾಹಕರಿಗಾಗಿ ನೀಡಲಿದೆ.

ಅಷ್ಟೇ ಅಲ್ಲದೇ ಸೊಲಾರ್ ಉಪಕರಣಗಳು,ಯುಪಿಎಸ್ ಹಾಗೂ ಬ್ಯಾಟರಿಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ಕೂಡ ನೀಡಿದೆ. ಇದಲ್ಲದೇ, ಎಸ್‌ಟಿಪಿ ಹಾಗೂ ಇಟಿಪಿ ವಾಟರ್ ಟ್ರೀಟ್ ಮೆಂಟ್ ಸೊಲ್ಯೂಶನ್ ಇಂಟಿಯರಿಯರ್ ಸೊಲೂಷನ್ ಸೇವೆ ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ.

ಇನ್ನೂ ಮಹತಿ ಎಂಟರ್ ಪ್ರೈಸಸ್ ಬಿಕೆವಿ ಹಾಲಿಡೇಸ್ ಸಹಭಾಗಿತ್ವದಲ್ಲಿ ಹಾಲಿಡೇಸ್ ಪ್ಯಾಕೇಜ್, ಹೊಟೇಲ್ ಬುಕ್ಕಿಂಗ್, ಟ್ರೈನ್ ಟಿಕೆಟ್, ಏರ್ ಟಿಕೆಟ್, ಕಾರ್ ರೆಂಟಲ್ಸ್, ಟ್ರಾವೆಲ್ ಇನ್ಸುರೆನ್ಸ್, ಪಾಸ್‌ಪೋರ್ಟ್ ಹಾಗೂ ವಿಸಾ ಸೇವೆಗಳು ಲಭ್ಯ ಇದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾವ್ಯಶ್ರೀ ಎನ್ ರಾವ್,ಕೆ ಎಸ್ ನಾರಯಣ ರಾವ್,ವಿಧಿಶಾ ಎ ರಾವ್, ಮಹತಿ ಎ ರಾವ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.