ಮಲ್ಲೇಶ್ವರಂ : ಕಾಂಗ್ರೆಸ್ ನಿಂದ ಬೃಹತ್ ರೋಡ್ ಶೋ
ಬೆಂಗಳೂರು : ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್ ಪರ ಮಾಜಿ ಸಚಿವ ಎಂ.ಆರ್.ಸೀತಾರಾಂ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಏರ್ ರ್ಪೋರ್ಸ್, ಅಶೋಕ್ ನಗರ, ರಾಮಯ್ಯ ರಸ್ತೆ, ಮತ್ತಿಕೆರೆ, ತ್ರಿವೇಣೆ ರಸ್ತೆ ಯಶವಂತಪುರ ಸರ್ಕಲ್, ಸುಬ್ರಮಣ್ಯನಗರ ,ಮಿಲ್ಕ್ ಕಾಲೋನಿ, ಗಾಯಿತ್ರಿನಗರ ಮೂಲಕ ಬೃಹತ್ ರೋಡ್ ಶೋ ಸಾಗಿತು. ನೂರಾರು ಬೈಕ್ ಗಳು, ಕಲಾತಂಡಗಳು ರೋಡ್ ಶೋಗೆ ಮೆರಗು ನೀಡಿತು.
ಇದೇ ಸಂದರ್ಭದಲ್ಲಿ ಸೀತಾರಾಂ ಮಾತನಾಡಿ ಕಾಂಗ್ರೆಸ್ ಬಡವರ, ದೀನದಲಿತರ ಪರ ಹೋರಾಟ ಮಾಡುವ ಪಕ್ಷ. ಈ ಬಾರಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದ್ದು, ಮಲ್ಲೇಶ್ವರಂ ನಲ್ಲಿ ಗೆಲುವು ಸಾಧಿಸಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಜನರ ಹಿತರಕ್ಷಣೆ ಮತ್ತು ಒಳಿತಿಗಾಗಿ 5 ಮಹತ್ವಪೂರ್ಣ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.200ಯೂನಿಟ್ ವಿದ್ಯುತ್ ಉಚಿತ, ಮನೆಯ ಯಾಜಮಾನಿಗೆ 2000 ರೂ ಸಹಾಯಧನ, ಪ್ರತಿವ್ಯಕ್ತಿಗೆ 10ಕೆ.ಜಿ. ಉಚಿತ ಅಕ್ಕಿ ಮತ್ತು ನಿರುದ್ಯೋಗ ಭತ್ಯೆ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಭರವಸೆಗಳನ್ನು ಈಡೇರಿಸಲಾಗುವುದು.ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ಬಿಜೆಪಿ ಜನವಿರೋಧಿ ಆಡಳಿತಕ್ಕೆ ಜನ ರೋಸಿ ಹೋಗಿದ್ದಾರೆ ಎಂದು ಹೇಳಿದರು