ಜೈನಮಠದಲ್ಲಿ ಆ.31ರಿಂದ ಆ.6ರವರೆಗೆ ಏಳದೆ ಮಂದಾರ ರಾಮಾಯಣ

ಮೂಡುಬಿದಿರೆ: ತೌಳವ ಸಂಸ್ಕೃತಿಯ ಎಲ್ಲಾ ತಿರುಳನ್ನೂ ಒಳಗೊಂಡಿರುವ ತುಳು ಭಾಷೆಯ ಆಕರ ಗ್ರಂಥವಾಗಿರುವ ತುಳುವ ವಾಲ್ಮೀಕಿ ಮಂದಾರ ಕೇಶವ ಭಟ್ಟರು ಬರೆದ ಮಂದಾರ ರಾಮಾಯಣದ ಪಾರಾಯಣದಿಂದಾಗುವ ಮಹತ್ವವನ್ನು ಪ್ರಚಾರ ಪಡಿಸುವ ಉದ್ದೇಶದಿಂದ ತುಳುವರ್ಲ್ಡ್ ಮಂಗಳೂರು, ಧವಲತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ, ತುಳುಕೂಟ ಬೆದ್ರ ಹಾಗೂ ಮಂದಾರ ಪ್ರತಿಷ್ಠಾನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಜೈನ ಮಠದ ಭಟ್ಟಾರಕ ಸಭಾಭವನದಲ್ಲಿ ಆ.31ರಿಂದ ಆ.6ರವರೆಗೆ ಏಳು ದಿನಗಳ ಕಾಲ ಏಳದೆ ಮಂದಾರ ರಾಮಾಯಣ ಕಾರ್ಯಕ್ರಮ ನಡೆಯಲಿದೆ ಎಂದು ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವು ಜುಲೈ 31ರಂದು ಮಧ್ಯಾಹ್ನ 2ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಅನುವಂಶಿಕ ಪುರೋಹಿತ ಬಾಲಚಂದ್ರ ಹರಿಲಾತ್ಕರ್, ಪಟ್ಣಶೆಟ್ಟಿ ಸುದೇಶ್ ಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ.ಪ್ರತಿದಿನ ಸಾಯಂಕಾಲದಿಂದ 4 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 6 ಶನಿವಾರ ಸಾಯಂಕಾಲ ನಾಲ್ಕು ಗಂಟೆಗೆ ಸಮಾರೋಪ ಸಮಾರಂಭವನ್ನು ಆಳ್ವಾಸ್ತು ಳುಕುಟ ಬೆದ್ರ ಅಧ್ಯಕ್ಷ ಧನಕೀರ್ತಿ ಬಲಿಪ, ಸ್ಥಾಪಕ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಮಂದಾರ ಪ್ರತಿಷ್ಠಾನದ ಉಪಾಧ್ಯಕ್ಷ ರಾಜೇಶ್ ಭಟ್ ಮಂದಾರ, ಕಾರ್ಯದರ್ಶಿ ಪ್ರಮೋದ್ ಸಪ್ರೆ, ತುಳುವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಬದಿಯಡ್ಕ, ಕಾರ್ಯದರ್ಶಿ ಮಾಧವ ಭಂಡಾರಿ ಸುದ್ದಿಗೋಷ್ಠಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.