ಮೇಲ್ಜಾತಿಯವರು ಕೇಳಿದರೆ ನಿಗಮ ಈಡಿಗ ಬಿಲ್ಲವರಿಗೆ ಕೋಶ ಇದ್ಯಾವ ನ್ಯಾಯ
ಮಂಗಳೂರು: ರಾಜ್ಯ ಸರಕಾರ ಮೇಲ್ಜಾತಿಯವರು ಕೇಳಿದರೆ ನಿಗಮ ಕೊಡುತ್ತಾರೆ. ಹಿಂದುಳಿದ ಈಡಿಗ-ಬಿಲ್ಲವ ಸಮುದಾಯವರು ಕೇಳಿದರೆ ಕೋಶ ಕೊಡುತ್ತಾರೆ. ಇದ್ಯಾವ ನ್ಯಾಯ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಸರಕಾರ ನಾರಾಯಣ ಗುರು ಕೋಶ (ಕೋರ್ಪಸ್ ಫಂಡ್) ಘೋಷಿಸಿ ನೀಡಿರುವ ಆದೇಶ ಬೋಗಸ್ ಎಂದು ಸ್ವಾಮೀಜಿಯವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆದೇಶದ ಪ್ರತಿಯನ್ನು ಹರಿದು ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದರು. ಈಡಿಗ ಬಿಲ್ಲವ ಸಮುದಾಯದ ಬೇಡಿಕೆ ನಾರಾಯಣ ಗುರು ಅಭಿವೃದ್ಧಿ ನಿಗಮ ಆಗಿದ್ದು, ಬೇಡಿಕೆಗಳ ಈಡೇರಿಕೆ ತನಕ ಹೋರಾಟ ಮುಂದುವರಿಯುವುದು ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.