ಮಂಗಳೂರಿನಲ್ಲಿ ‘ಕೆಂಗಣ್ಣು ಸಮಸ್ಯೆ
ಮಂಗಳೂರು : ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಕಣ್ಣು ನೋವು ( ಕೆಂಗಣ್ಣು) ಸಮಸ್ಯೆ ಹೆಚ್ಚಾಗಿದ್ದು, ಕಣ್ಣು ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ಇಂತಹ ಸಮಸ್ಯೆಗಳ ಸರತಿ ಸಾಲು ಉದ್ದವಾಗುತ್ತಿದೆ. ಮಕ್ಕಳಾದರೆ ಶಾಲೆಗೆ ಬರಬೇಡಿ ದೊಡ್ಡವರಾದರೆ ಕಚೇರಿಗೆ ಬರಬೇಡಿ ಎಂದು ಬೇಡುವ ಸ್ಥಿತಿ ಉದ್ಭವಾಗಿದೆ.
ಎಲ್ಲಕ್ಕೂ ಹವಾಮಾನ ವೈಪರೀತ್ಯವೇ ಕಾರಣ ಎನ್ನುವುದು ಆರೋಗ್ಯ ತಜ್ಞರ ಮಾತು.ಇದು ಕಣ್ಣು ನೋವು (ಮದ್ರಾಸ್ ಐ) ಬರುವ ಸಮಯವಲ್ಲ. ಹೆಚ್ಚಾಗಿ ಮಾನ್ಸೂನ್ ಸಮಯದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಈಗ ಬಿಟ್ಟು ಬರುವ ಮಳೆಯ ಜತೆಗೆ ಚಳಿಯ ಪ್ರವೇಶ ಎರಡು ಜತೆಗೂಡಿದಾಗ ಈ ವಿಶೇಷ ವೈರಸ್ ಯಾವುದೇ ವಯಸ್ಸು ನೋಡದೇ ಕಣ್ಣುಗಳ ಮೇಲೆ ದಾಳಿ ಇಡುತ್ತಾ ಕಣ್ಣು ನೋವು ತರಿಸುತ್ತಿದೆ.
ಬೇಸಿಗೆ ಬಿಟ್ಟು ಚಳಿಯಲ್ಲಿ ಕಾಣಿಸಿತು: ಐ ಕಾಂಜಂಕ್ಟಿವಿಟಿಸ್ ಅಥವಾ ಮದ್ರಾಸ್ ಐ ಸಮಸ್ಯೆಯು ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಮಳೆಗಾಲ ಮುಗಿದು ಚಳಿಗಾಲದ ಆರಂಭದಲ್ಲೇ ವಕ್ಕರಿಸಿದೆ. ಇದಕ್ಕೆ ಬಹುಮುಖ್ಯವಾದ ಕಾರಣ ಇತ್ತೀಚೆಗೆ ಕಾಣಿಸಿಕೊಂಡ ಆಗಾಗಿನ ಮಳೆ. ಇದರ ಜತೆಯಲ್ಲಿಮಾ ನ್ಸೂನ್ ಪೂರ್ಣವಾಗಿ ಮುಗಿಯುವ ಹೊತ್ತಿನಲ್ಲಿ ಈ ಕಣ್ಣಿನ ವೈರಸ್ ತನ್ನ ಅಬ್ಬರವನ್ನು ತೋರಿಸಿದೆ.
ಈ ರೋಗದಲ್ಲಿ, ಕಣ್ಣುಗಳ ಬಿಳಿ ಭಾಗದಲ್ಲಿ ಸೋಂಕು ಸಂಭವಿಸುತ್ತದೆ ಮತ್ತು