ವಾಲ್‍ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿದ್ದ ಗೋವಿಂದ ಅವರು ಮರುಸೇರ್ಪಡೆ

ಕಳೆದ ಹಲವಾರು ವರ್ಷಗಳಿಂದ ವಾಲ್ ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ನೌಕರ ಗೋವಿಂದ ಅವರನ್ನ ಕರ್ತವ್ಯಕ್ಕೆ ಮರು ಸೇರ್ಪಡೆಗೊಳಿಸಲಾಗಿದೆ. ಅವರ ಕರ್ತವ್ಯದ ವಯಸ್ಸು ಮೀರಿದ್ದರೂ, ಅವರ ಕೌಟುಂಬಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಮಾನವೀಯ ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಮತ್ತೆ ಸೇರ್ಪಡೆ ಮಾಡುವಂತೆ ಸೂಚಿಸಿದೆ. ಈ ಸಂಬಂಧ ಮೇಯರ್ ಜಯಾನಂದ ಅಂಚನ ಅವರು ಮಾಧ್ಯಮದೊಂದಿಗೆ ಮಾತನಾಡಿ ಗೋವಿಂದ ಅವರ ಕಷ್ಟದ ಪರಿಸ್ಥಿತಿಯನ್ನು ಕಂಡು ಮತ್ತೆ ವಾಲ್ಮ್ ಮ್ಯಾನ್ ಆಗಿ ಮರು ಸೇರ್ಪಡೆ ಮಾಡಿದ್ದೇವೆ. ಅವರ ಹಿರಿತನದಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಸಾರ್ವಜನಿಕರ ದೂರುಗಳು ಸ್ಥಳೀಯ ಕಾಪೆರ್Çರೇಟರ್ ಗೆ ಹಾಗೂ ಆಯುಕ್ತ ರಿಗೆ ಬಂದಿದ್ದು ಈ ಹಿನ್ನೆಲೆಯಲ್ಲಿ ಪಾಲಿಕೆಯ ಇಂಜಿನಿಯರ್ ಅವರು ಕರ್ತವ್ಯ ದಿಂದ ಮುಕ್ತಿಗೊಳಿಸಿದ್ದರು. ಇದೀಗ ನಮ್ಮ ಗಮನಕ್ಕೆ ಬಂದ ಮೇರೆಗೆ ಅವರನ್ನು ಮರು ಸೇರ್ಪಡೆಗೊಳಿಸಿದ್ದೇವೆ ಎಂದು ನುಡಿದರು. ಸ್ಥಳೀಯ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ರಂಜಿನಿಕೋಟ್ಯಾನ್ ಅವರು ಕೂಡ ಗೋವಿಂದ ಅವರು ತನ್ನ 23ನೆಯ ಪಾಲಿಕೆಯ ವಾರ್ಡಿನಲ್ಲಿ ನಿರ್ವಹಿಸುತ್ತಿದ್ದ, ಕರ್ತವ್ಯ ಮಾಡುತ್ತಿದ್ದರು. ನನ್ನ ವಾರ್ಡಿನ ನಿವಾಸಿಗಳು ಸರಿಯಾಗಿ ನೀರು ಮನೆ ಮನೆಗೆ ತಲುಪದ ಹಿನ್ನೆಲೆಯಲ್ಲಿ ಪದೇ ಪದೇ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಮೇಯರ್ ಜಯಾನಂದ ಅಂಚನವರಲ್ಲಿ ತಿಳಿಸಿದ ಮೇರೆಗೆ ಅವರ ವಯಸ್ಸನ್ನು ಪರಿಗಣಿಸಿ ಪರ್ಯಾಯ ಉದ್ಯೋಗವಾಗಿ ಕಾವಲುಗಾರ ಕೆಲಸಕ್ಕೆ ಸೇರಿಸುವುದಾಗಿ ಭರವಸೆ ನೀಡಿ ಗೋವಿಂದ ಅವರಿಗೆ ಮುಖಃತಹ ತಿಳಿಸಿದ್ದರು.ಆದರೆ ಕಾರಣಾಂತರದಿಂದ ಗೋವಿಂದ ಅವರು ಈ ಹುದ್ದೆಯನ್ನು ನಿರಾಕರಿಸಿದ್ದರು. ಆದರೆ ಗೋವಿಂದ ಅವರು ವಾಲ್ ಮೆನ್ ಹುದ್ದೆಯನ್ನೇ ಬಯಸಿದ್ದರಿಂದ ಸಾರ್ವಜನಿಕರು ನೀಡಿದ ದೂರನ್ನು ಗಮನಕ್ಕೆ ತಂದು ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಅವರಿಗೆ ಸೂಚಿಸಿ ಅವರು ಭರವಸೆಯನ್ನ ಕೊಟ್ಟಿದ್ದರಿಂದ ಮತ್ತೆ ಮರು ಸೇರ್ಪಡೆ ಮಾಡಿದ್ದೇವೆ ಎಂದು ನುಡಿದರು. ಇವರ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿರುವುದನ್ನು ಕಂಡು ಅವರ ಪುತ್ರಿಯವರೆಗೂ ಉದ್ಯೋಗವನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ಅವರ ಕಚೇರಿಯಲ್ಲಿ ಕಲ್ಪಿಸಿ ಕೊಟ್ಟಿದ್ದಾರೆ.ಇವತ್ತು ಸಮಸ್ಯೆಯನ್ನು ಬಗೆಹರಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾಕ್ಟರ್ ಭರತ್ ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.

ಘಟನೆಯ ಕುರಿತಾಗಿ ಮಾತನಾಡಿದ ಗೋವಿಂದ ಅವರ ಪುತ್ರಿ ಈ ಹಿಂದೆ ಆದಂತಹ ಸಮಸ್ಯೆಗಳ ಕುರಿತು ನಮಗೆ ತಿಳಿದಿರಲಿಲ್ಲ .ನಾವು ಮೇಯರ್ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರನ್ನು ಕಂಡು ಭೇಟಿ ಮಾಡಿ ಮಾತನಾಡಿದಾಗ ಸಮಸ್ಯೆಗಳ ಅರಿವಾಯಿತು.ಇನ್ನು ಮುಂದೆ ಇಂಥ ಸಮಸ್ಯೆ ಆಗದಂತೆ ಅವರು ಕರ್ತವ್ಯ ನಿರ್ವಹಿಸುವ ವಿಶ್ವಾಸವಿದೆ ಎಂದು ನುಡಿದರಲ್ಲದೆ ಶಾಸಕ ಡಾ.ಭರತ್ ಶೆಟ್ಟಿ ವೈ, ಮೇಯರ್ ಹಾಗೂ ಸ್ಥಳೀಯ ಮನಪಾ ಸದಸ್ಯರಿಗೆ ಕೃತಜ್ಞತೆ ವ್ಯಕ್ತಪಡಿಸಿದರಲ್ಲದೆ ಸಾಮಾಜಿಕ ಹೋರಾಟಗಾರ್ತಿ ರವಿ ಪ್ರಸನ್ನ ಅವರು ಕೂಡ ಸಮಸ್ಯೆಗೆ ಸ್ಪಂದಿಸಿದ್ದನ್ನ ಸ್ಮರಿಸಿಕೊಂಡರು. ಇದೀಗ ಗೋವಿಂದ ಅವರ ಕರ್ತವ್ಯ ನಿಯೋಜನೆಗೆ ಕುರಿತಂತೆ ಗೊಂದಲಗಳು ಬಗೆಹರಿದಿದ್ದು ಶಾಸಕ ಡಾ. ಭರತ್ ಶೆಟ್ಟಿ ವೈ ಅವರ ಗಮನಕ್ಕೆ ಬಂದ ಸಂಬಂದಪಟ್ಟವರಲ್ಲಿ , ಅವರ ಮಧ್ಯ ಪ್ರವೇಶದಿಂದ ಗೊಂದಲ ಸುಖಾಂತ್ಯಗೊಂಡಿದೆ. ಗೋವಿಂದ ಅವರ ಕುಟುಂಬ ವಾಸಿಸುವ ಜಾಗದ, ದಾಖಲೆ ಪತ್ರ ಸರಿ ಇಲ್ಲದ ಕಾರಣ ಸರಕಾರಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಮನೆ ಮಂದಿ ಮನವಿ ಮಾಡಿಕೊಂಡ ಮೇರೆಗೆ ಶಾಸಕರು ಅಧಿಕಾರಿಗಳಿಗೆ ಸೂಕ್ತ ದಾಖಲೆ ಪತ್ರೆಯನ್ನು ಸರಿಪಡಿಸುವಂತೆ ಸೂಚಿಸಿರುವ ಮೇರೆಗೆ ಮನೆಯ ಸಮಸ್ಯೆಯೂ ಕೂಡ ಬಗೆಹರಿದಿದೆ.ಶೀಘ್ರ ದಾಖಲೆ ಪತ್ರ ಫಲಾನುಭವಿಯ ಕೈ ಸೇರಲಿದೆ.

Related Posts

Leave a Reply

Your email address will not be published.