ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ – ವ್ಯವಹಾರದಲ್ಲಿನ ಅಡೆತಡೆಗಳ ನಿವಾರಣೆ ವಿಚಾರಗೋಷ್ಠಿ

ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಇದರ ವತಿಯಿಂದ ಮಂಗಳೂರು ಕ್ಲಬ್‍ನಲ್ಲಿ ಸದಸ್ಯರ ಸಭೆ ಯನ್ನು ನಡೆಸಲಾಯಿತು. ಎನ್‍ಆರ್‍ಐ ಉದ್ಯಮಿ ಶ್ರೀ ಮೈಕಲ್ ಡಿಸೋಜಾ ಅವರು ಮುಖ್ಯ ಭಾಷಣಕಾರರಾಗಿದ್ದರು.

ಮೈಕಲ್ ಡಿಸೋಜರವರು ಮಾತನಾಡಿ ಪರಿಶ್ರಮದ ಶಕ್ತಿ ಮತ್ತು ವ್ಯವಹಾರದ ಮೂಲಕ ವಿಪತ್ತುಗಳನ್ನು ನಿವಾರಿಸುವ ಬಗ್ಗೆ, ಪುತ್ತೂರಿನ ಪುಟ್ಟ ಊರಿನಿಂದ ಬಂದ ತಮ್ಮ ಜೀವನ ಪಯಣದ ಬಗ್ಗೆ , ಸಣ್ಣ ವಯಸ್ಸಿನಲ್ಲಿ ವ್ಯಾಪಾರವನ್ನು ಪ್ರಾರಂಭಿಸಿ ಯು.ಎ.ಇ ಯಲ್ಲಿನ ವ್ಯಾಪಾರ ಸಾಮಥ್ರ್ಯದ ಬಗ್ಗೆ ಅಧ್ಯಯನ ನಡೆಸಿ, ದೊಡ್ಡ ಪ್ರಮಾಣದಲ್ಲಿ ನಂಬಿಕಸ್ಥ ಜನರಿಂದ ವಂಚನೆ ನಡೆದಾಗಲೂ ಧೈರ್ಯಗುಂದದೆ ರಿಯಲ್ ಎಸ್ಟೇಟ್ ಕ್ಷೇತ್ರದ ವ್ಯವಹಾರವನ್ನು ಮುನ್ನಡೆಸಿ ಯಶಸ್ವಿಯಾದ ಬಗ್ಗೆ ವಿವರಿಸಿದರು .ಜೊತೆಯಲ್ಲಿ ತಮ್ಮ ಪತ್ನಿ ಫ್ಲೇವಿಯಾರ ಸಹಕಾರವನ್ನು ಸ್ಮರಿಸಿದರು.

ನಿಮ್ಮ ವ್ಯವಹಾರವು ಆರ್ಥಿಕ ಪಾರದರ್ಶಕತೆಯನ್ನು ಹೊಂದಿರಬೇಕು. ಕಠಿಣ ಪರಿಶ್ರಮ , ನಿಮ್ಮ ಕೆಲಸದ ಬಗ್ಗೆ ಜ್ಞಾನ ಮತ್ತು ಹಣಕಾಸಿನ ಸರಿಯಾದ ನಿರ್ವಹಣೆ ವ್ಯವಹಾರದಲ್ಲಿ ಯಶಸ್ವಿಗೆ ಪ್ರಮುಖವಾಗಿದೆ . ನಿಮ್ಮ ವ್ಯವಹಾರ ವಿಫಲವಾದರೂ ನಿಮ್ಮ ಹೆಸರು ಖ್ಯಾತಿಯಲ್ಲಿರಬೇಕು ಎಂದು ಮೈಕಲ್ ಡಿಸೋಜಾ ಸಲಹೆ ನೀಡಿದರು.

ರಚನಾ ಸಂಸ್ಥೆಯ ಅಧ್ಯಕ್ಷರಾದ ವಿನ್ಸಂಟ್ ಕುಟಿನ್ಹಾ ಸ್ವಾಗತಿಸಿದರು. ಉಪಧ್ಯಕ್ಷ ಸಿಎ ರುಡಾಲ್ಫ್ ರೋಡ್ರಿಗಸ್ ಅತಿಥಿಗಳನ್ನು ಪರಿಚಯಿಸಿದರು. ಆಡಳಿತ ಮಂಡಳಿ ಸದಸ್ಯರಾದ ಲೆಸ್ಲಿ ರೇಗೋ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಯುಲಾಲಿಯಾ ಡಿಸೋಜಾ ವಂದಿಸಿದರು.

Related Posts

Leave a Reply

Your email address will not be published.