ಮಂಗಳೂರು: ಶ್ರೀ ರಾಮಕೃಷ್ಣ ಸ್ಕೂಲ್‌ನ 43ನೇ ಶಾಲಾ ವಾರ್ಷಿಕೋತ್ಸವ
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನ ಶ್ರೀ ರಾಮಕೃಷ್ಣ ಸೂಲ್ಕ್ 43ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು. ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರನ್ನ ಮನರಂಜಿಸಿತು.
ಉತ್ತಮ ಶಿಕ್ಷಣಕ್ಕೆ ಹೆಸ್ರು ಪಡೆದುಕೊಂಡಿರುವ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನ ಶ್ರೀ ರಾಮಕೃಷ್ಣ ಸೂಲ್ಕ್ ನ ವಾರ್ಷಿಕೋತ್ಸವವು
ಗೀತಾ ಎಸ್ ಎಂ ಶೆಟ್ಟಿ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಹಾಗೂ
ಪಾಲಿಶಕ್ತಿ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ವಿಶಾಲ್ ಎಲ್ ಸಾಲಿಯನ್ ಪಾಲ್ಗೊಂಡಿದ್ರು. ಇದೇ ವೇಳೆ ಮುಖ್ಯಯಾಗಿದ್ದ ವಿಶಾಲ್ ಎಲ್.ಸಾಲಿಯಾನ್ ಅವರ ಪರಿಚಯವನ್ನ ಉಪಪ್ರಾಂಶುಪಾಲೆ ರೂಪಾ
ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶಾಲ್ ಎಲ್.ಸಾಲಿಯಾನ್, ಬಾಲ್ಯದ ಕ್ಷಣ ಮತ್ತೆ ನೆನಪು ಮತ್ತೆ ಕಾಡಿದೆ. ಇಲ್ಲಿ ಕಲಿತ ಅದೆಷ್ಟೋ ಕ್ಷಣ ಮರೆಯುವಂತಿಲ್ಲ ಎಂದು ಹೇಳಿದ ಅವರು, ಸಾಧನೆ ಯಾವುದೇ ಸಮಸ್ಯೆ ಕಾಡಲ್ಲ, ಪರಿಶ್ರಮ ಪಟ್ಟಾಗ ಯಶಸ್ಸು ಖಂಡಿತವಾಗಿ ಸಿಗುತ್ತದೆ ಎಂದು ಹೇಳಿದರು.
ಶಾಲಾ correspondent ಡಾ.ಬಿ. ಸಂಜೀವ ರೈ ಅವರು ಮಾತನಾಡಿ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ಹಲವು ರೀತಿಯ ವ್ಯವಸ್ಥೆಯನ್ನ ಮಾಡಲಾಗಿದೆ.ವಿದ್ಯಾರ್ಥಿಗಳ ಸಾಧನೆಗೆ ಪೂರಕ ವ್ಯವಸ್ಥೆಯನ್ನ ಮಾಡಲಾಗಿದೆ ಎಂದು ಹೇಳಿದರು.
ಶಾಲಾ ಪ್ರಾಂಶುಪಾಲರಾದ ಡಾ. ಪ್ರೆಸಿಲ್ಲಾ ಡಿಸೋಜಾ ಅವರು ಶಾಲಾ ವರದಿ ಹಾಗೂ ಅತಿಥಿ ಗಣ್ಯರನ್ನ ಸ್ವಾಗತಿಸಿದರು.
ಶಿಕ್ಷಕಿ ಆಶಾ ಅವರು ವಂದಿಸಿದರು. ಈ ವೇಳೆ ಪೋಷಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟರು. ತದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನ ಸ್ಮರಣಿಕೆ ನೀಡಿ, ಅತಿಥಿ ಗಣ್ಯರು ಗೌರವಿಸಿದ್ರು. ಮಾತ್ರವಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಪ್ರಶಸ್ತಿಯನ್ನು ನೀಡಲಾಯಿತು