ಮಂಗಳೂರು : ಮೇ 22ರಿಂದ 24ರ ವರೆಗೆ ಮಂಗಳೂರಿನಲ್ಲಿ ಚಿಣ್ಣರ ಕಲರವ
ಚಿಣ್ಣರ ಚಾವಡಿ ಮಂಗಳೂರು ಆಶ್ರಯದಲ್ಲಿ ಮೇ 22ರಿಂದ 24ರವರೆಗೆ ನಗರದ ಸಂತ ಅಲೋಶಿಯಸ್ ಹೈಸ್ಕೂಲ್ ನ ಸಭಾಂಗಣದಲ್ಲಿ ಚಿಣ್ಣರ ಕಲರವ – 2023 ಮಕ್ಕಳ ಸಂತಸ ಕಲಿಕಾ ಕಾರ್ಯಗಾರವು ಜರುಗಲಿದೆ.
ಮೇ 22ರಂದು ಸೋಮವಾರ ಬೆಳಿಗ್ಗೆ 9.30ಕ್ಕೆ ಪ್ರಾರಂಭಗೊಳ್ಳಲಿರುವ ಕಾರ್ಯಗಾರದ ಉದ್ಘಾಟನೆಯನ್ನು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ. ಫಾ. ಮೆಲ್ವಿನ್ ಪಿಂಟೋ SJ ಯವರು ನಡೆಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್,ಜಿಲ್ಲಾ ಯುವಜನ ನಾಯಕರಾದ ಬಿ ಕೆ ಇಮ್ತಿಯಾಜ್, ಯುವ ವಕೀಲರಾದ ಮನೋಜ್ ವಾಮಂಜೂರು,ಮಕ್ಕಳ ಪರ ಹೋರಾಟಗಾರರಾದ ಅಸುಂತ ಡಿಸೋಜ,ಸಾಮಾಜಿಕ ಚಿಂತಕರಾದ ಶಾಂತಿ ಡಾಯಸ್, ಸ್ಟೆಲ್ಲಾ ಪಾಯಸ್ ರವರು ಭಾಗವಹಿಸಲಿದ್ದಾರೆ.
ಮೇ 24ರಂದು ಸಂಜೆ 5 ಗಂಟೆಗೆ ಕಾರ್ಯಾಗಾರದ ಸಮಾರೋಪ ಸಮಾರಂಭ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಸಂತ ಅಲೋಶಿಯಸ್ ಹೈಸ್ಕೂಲ್ ನ ಮುಖ್ಯೋಪಾಧ್ಯಾಯರಾದ ರೆ. ಫಾ.ಜೆರಾಲ್ಡ್ ಫುರ್ತಾಡೋ SJ, ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೊಯ್ ಕ್ಯಾಸ್ಟಲಿನೋ,ನಿವೃತ್ತ ಪ್ರಾಂಶುಪಾಲರಾದ ಡಾ. ಕಾರ್ಮಿಲಿಟಾ ಡಿಸೋಜ,ಜಿಲ್ಲಾ ಯುವಜನ ನಾಯಕರಾದ ಸಂತೋಷ್ ಬಜಾಲ್, ಸಾಮಾಜಿಕ ಚಿಂತಕರಾದ ಫ್ಲೇವಿ ಕ್ರಾಸ್ತಾ,ಪ್ರಮೀಳಾ ದೇವಾಡಿಗ, ಕ್ವೀನಿ ಪರ್ಸಿ ಆನಂದ್ ರವರು ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಕ್ರಿಯಾತ್ಮಕ ಚಿತ್ರಕಲೆ,ಉದುವ ಚಿತ್ರ, ಮಡಚುವ ಚಿತ್ರ,ಮುಳುಗಿಸುವ ಚಿತ್ರ,ಕ್ಲೇ ಆರ್ಟ್,ವರ್ಲಿ ಆರ್ಟ್, ಗುಳ್ಳೆ ಆಟ, ಮುಖಾಭಿನಯ, ನಾಟಕ,ಅಭಿನಯ ಗೀತೆ, ಮಿಮಿಕ್ರಿ,ಮ್ಯಾಜಿಕ್ ಶೋ, ಮನೋರಂಜನಾ ಆಟಗಳಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಮೈಮ್ ರಾಮದಾಸ್, ಪ್ರೇಮನಾಥ್ ಮರ್ಣೆ,ವಿಸ್ಮಯ ವಿನಾಯಕ್,ವಿದ್ದು ಉಚ್ಚಿಲ್, ಸೂರಜ್ ಶೆಟ್ಟಿ, ಪ್ರವೀಣ್ ವಿಸ್ಮಯ,ಗುರುಪ್ರಸಾದ್, ತಾರಾನಾಥ ಕೈರಂಗಳ, ಮನೋಜ್ ವಾಮಂಜೂರುರವರು ಭಾಗವಹಿಸಲಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ಮೇ 22ರಂದು ಬೆಳಿಗ್ಗೆ 8.30ಕ್ಕೆ ತಮ್ಮ ಹೆಸರನ್ನು ನೋಂದಾಯಿಸುವ ಮೂಲಕ ಶಿಬಿರಾರ್ಥಿಗಳಾಗಿ ಭಾಗವಹಿಸಬಹುದು ಎಂದು ಚಿಣ್ಣರ ಚಾವಡಿ ಮಂಗಳೂರು ತಿಳಿಸಿದೆ.