ಮಂಗಳೂರು: 1 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆ; ಶಾಸಕ ಡಾ ವೈ. ಭರತ್ ಶೆಟ್ಟಿ ಅವರಿಂದ ಉದ್ಘಾಟನೆ

ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ವಾರ್ಡ್೧೮ ಕಾವೂರು ವ್ಯಾಪ್ತಿಯ ಆಕಾಶಭವನ ಮುಖ್ಯ ರಸ್ತೆಯನ್ನು ಮಹಾತ್ಮಗಾಂಧಿ ಯೋಜನೆಯಡಿ ೧ ಕೋಟಿ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣವಾಗಿದ್ದು ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸಿದರು. ಮೇಯರ್ ಜಯಾನಂದ ಅಂಚನ್, ಸ್ಥಳೀಯ ಮ.ನ.ಪಾ ಸದಸ್ಯೆ ಗಾಯತ್ರಿ ಎ ರಾವ್,ಕಾವೂರು ೨ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ, ಬೂತ್ ಅಧ್ಯಕ್ಷರಾದ ಸಚಿನ್ ಶೆಟ್ಟಿ, ಪ್ರಮುಖರಾದ ಮಂಜುನಾಥ್ ಪ್ರಭು ಉಮೇಶ್ ಪೂಜಾರಿ,ಜಗದೀಶ್ ಅಮೀನ್, ಸಂದೇಶ್ ಶೆಟ್ಟಿ ಆಕಾಶಭವನ, ಅಶ್ವಿನ್ ಅಮೀನ್,ಪ್ರಶಾಂತ್ ಪೂಜಾರಿ, ರಕ್ಷಿತ್ ಪೂಜಾರಿ, ಸಂಜಯ್ ಪೂಜಾರಿ, ನಾರಾಯಣ ಶೆಟ್ಟಿ, ಜಯರಾಮ್ ಕೋಟ್ಯಾನ್, ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.