ಬಾಂಬ್ ಬ್ಲಾಸ್ಟ್ ಭಾರತೀಯ ಜನತಾ ಪಕ್ಷದ ಚುನಾವಣಾ ತಂತ್ರ : ಹಿಂದೂ ಮಹಾಸಭಾ ವ್ಯಂಗ್ಯ

2023 ರ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಬೀದಿಗೆ ಬೆದರಿದ ಭಾರತೀಯ ಜನತಾ ಪಕ್ಷದ ಹತಾಶೆಯ ನಡೆಯೇ ಈ ಬಾಂಬ್ ಬ್ಲಾಸ್ಟ್ ಪ್ರಕರಣ…ಅತಂಕವಾದ ಅಳಿಸಿ ..ದೇಶ ಉಳಿಸಿ ಎಂಬ ಹಿಂದೂ ಮಹಾಸಭಾ ಘೋಷ ವಾಕ್ಯವನ್ನು ಷಡ್ಯಂತ್ರದಿಂದ ತನ್ನದಾಗಿಸಿಕೊಂಡಂತಹ ಭಾರತೀಯ ಜನತಾ ಪಕ್ಷ ,ಕನಿಷ್ಠ ಪಕ್ಷ, ಆ ವಾಕ್ಯದ ಮೌಲ್ಯವನ್ನು ತಿಳಿದುಕೊಂಡಿದ್ದರೆ, ಇವತ್ತು ಈ ಘಟನೆ ಸಂಭವಿಸುತ್ತಿರಲಿಲ್ಲ. ಆಡಳಿತದಲ್ಲಿರುವ ಸರಕಾರ ದ ವೈಫಲ್ಯವೆ ಈ ಘಟನೆಗೆ ಕಾರಣ.ಭಾರತೀಯ ಜನತಾ ಪಕ್ಷದ ಹಿಂದೂ ವಿರೋಧಿ ಸಂಘಟನೆ ಹಾಗೂ ಎಸ್ ಡಿ ಪಿ ಐ ಪಕ್ಷದ ಜೊತೆಗಿನ ಅನೈತಿಕ ಮೈತ್ರಿ ಕರಾವಳಿಯಲ್ಲಿ ಹಾಗೂ ರಾಜ್ಯದ್ಯಂತ ಭಯೋತ್ಪಾದಕರ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ಹೆಚ್ಚಳಕ್ಕೆ ಕಾರಣ…
ಡಬಲ್ ಇಂಜಿನ್ ಸರಕಾರ ಎಂದು ಬಡಾಯಿ ಕೊಚ್ಚುವ ಭಾರತೀಯ ಜನತಾ ಪಕ್ಷದ ಸರಕಾರ ಇನ್ನಾದರೂ ಚುನಾವಣೆ ಗಿಮಿಕ್ ಅನ್ನು ಬಿಟ್ಟು, ರಾಜ್ಯದ ಜನರ ಜೀವ ಹಾಗೂ ಜೀವನದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ ,ಬಾಂಬ್ ಬ್ಲಾಸ್ಟ್ ನಂತಹ ವಿದ್ವಾಂಸಕ ಕೃತ್ಯವನ್ನು ಎಸಿಗಿದವರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ, ನಿರ್ಧಾಕ್ಷಿಣ್ಯವಾಗಿ ಶಿಕ್ಷೆಗೆ ಒಳಪಡಿಸಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷರಾದ ರಾಜೇಶ್ ಪವಿತ್ರ ಆಗ್ರಹಿಸಿದರು…