ಮಂಗಳೂರಿನ ಎಂ.ಜಿ. ರೋಡ್ ರಸ್ತೆ ಬದಿಯಲ್ಲಿ ಮತ್ತೆ ಹರಿಯುತ್ತಿರುವ ಕೊಳಚೆ ನೀರು

ಮಂಗಳೂರಿನ ಹೃದಯ ಭಾಗವಾದ ಎಂ.ಜಿ. ರಸ್ತೆಯಲ್ಲಿ ಮತ್ತೆ ಕೊಳಚೆ ನೀರು ಹರಿಯುತ್ತಿದೆ. ಬೆಸೆಂಟ್ ಕಾoಪ್ಲೇಸ್ನ ಡ್ರೈನೇಜ್ನೀರನ್ನು ರಸ್ತೆಗೆ ಬಿಡುತ್ತಿದ್ದು, ಇದರಿಂದ ಪಾದಚಾರಿಗಳು ಮೂಗು ಮುಚ್ಚಿಕೊಂಡು ಹೋಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಂ. ಜಿ. ರಸ್ತೆಯಲ್ಲಿ ಡ್ರೈನೇಜ್ ನೀರು ಮತ್ತೆ ಹರಿಯಲಾರಂಬಿಸಿದೆ. ಈ ಹಿಂದೆ ಡ್ರೈನೇಜ್ ನೀರು ಹರಿಯುವ ಬಗ್ಗೆ ವಿ4 ನ್ಯೂಸ್‌ನಲ್ಲಿ ಸಮಗ್ರವಾದ ವರದಿ ಬಿತ್ತಿರಿಸಿ, ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ತಕ್ಷಣ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಡ್ರೈನೇಜ್ ಸಮಸ್ಯೆಗೆ ಮುಕ್ತಿಯನ್ನು ನೀಡಿದ್ದರು. ಇದೀಗ ಮತ್ತೆ ಅಲ್ಲಿಯೇ ಡ್ರೈನೇಜ್ ಸಮಸ್ಯೆ ತಲೆದೋರಿದೆ.

ಡ್ರೈನೇಜ್ಕಾಮಗಾರಿಯನ್ನು ಸರಿಪಡಿಸಿ ಒಂದು ವಾರವೂ ಆಗಿಲ್ಲ. ಅದಾಗಲೇ ಬೆಸೆಂಟ್ ಕಾಂಪ್ಲೆಕ್ಸ್ನಿದ ಡ್ರೈನೇಜ್ ನೀರನ್ನು ರಸ್ತೆಗೆ ಬಿಡುತ್ತಿದ್ದಾರೆ. ಇದರಿಂದ ಪಾದಚಾರಿಗಳು ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ಪರಿಸ್ಥಿತಿ ಬಂದಿದೆ. ತಕ್ಷಣವೇ ಸಂಬoಧಪಟ್ಟ ಅಧಿಕಾರಿಗಳು ಎಚ್ಚೆತ್ತು ಡ್ರೈನೇಜ್ ನೀರನ್ನು ರಸ್ತೆಗೆ ಹರಿಯಬಿಡುತ್ತಿರುವವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ
