ಇಂದಿರಾ ಗಾಂಧಿ ಸರಕಾರ ಹೇರಿದ್ದ ತುರ್ತು ಪರಿಸ್ಥಿತಿಯಿಂದ ಜಿಲ್ಲೆಗೆ ಯಾವುದೇ ಕೆಡುಕಾಗಿಲ್ಲ: ಮಾಜಿ ಸಚಿವ ಬಿ. ರಮಾನಾಥ ರೈ
ಮಂಗಳೂರು: ಇಂದಿರಾ ಗಾಂಧಿ ಸರಕಾರ ಹೇರಿದ್ದ ತುರ್ತು ಪರಿಸ್ಥಿತಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ರೀತಿಯ ಕೆಡುಕಾಗಿಲ್ಲ, ಬದಲಾಗಿ ಆ ಕಾಲದಲ್ಲಿ ಹಲವಾರು ಪ್ರಗತಿಪರ ಯೋಜನೆ ಜಾರಿಗೆ ಬಂದವು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಕಾಲದಲ್ಲಿ ಭೂ ಮಸೂಧೆ ಕಾಯ್ದೆ, ಬ್ಯಾಂಕ್ ರಾಷ್ಟ್ರೀಕರಣ, ಖುಣ ಪರಿಹಾರ ಕಾಯ್ದೆ, ಬಸ್ ರಾಷ್ಟ್ರೀಕರಣ ಸಹಿತ ಹಲವಾರು ಯೋಜನೆ ಅನುಷ್ಠಾನಕ್ಕೆ ತರಲಾಯಿತು. ಆದರೆ ದೇಶಕ್ಕಾಗಿ ಪ್ರಾಣತೆತ್ತ ಇಂದಿರಾ ಗಾಂಧಿ ಅವರ ಹಸೆರಿಗೆ ಕಳಂಕ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.
ಹಿಂಸೆಗೆ ಹಿಂದೂ ಧರ್ಮದಲ್ಲಿಅವಕಾಶ ಇಲ್ಲ ಎಂದು ಸಂಸತ್ತಿನಲ್ಲಿ ಹೇಳಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಬಗ್ಗೆಯೂ ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಮೇಯರ್ ಶಶಿದರ್ ಹೆಗ್ಡೆ, ಸುರೇಂದ್ರ ಕಂಬಳಿ, ಬೇಬಿ ಕುಂದರ್, ಪಿಯೂಸು ರೋಡ್ರಿಗಾಸ್, ನವೀನ್ ಡಿ ಸೋಜಾ, ಅಪ್ಪಿ, ಜಯಶೀಲಾ ಅಡ್ಯಾಂತಯ, ಯೋಗೀಶ್ ನಾಯಕ್, ನಿತ್ಯಾನಂದ ಶೆಟ್ಟಿ, ನೀತ್ ಶರಣ್ ಉಪಸ್ಥಿತರಿದ್ದರು.