ಮಂಗಳೂರು: ನಗರದ ಮಂಗಳಾ ಸ್ಟೇಡಿಯಂನಲ್ಲಿ ರೈಸಿಂಗ್ ಚಾಂಪಿಯನ್ಸ್ ಕ್ಯಾಂಪ್ ನ ಉದ್ಘಾಟನೆ

ಮಂಗಳೂರಿನ ಅಥ್ಲೆಟಿಕ್ಸ್ ಅಕಾಡೆಮಿಯಾದ ಮಂಗಳಾ ಅಥ್ಲಿಟ್ ವತಿಯಿಂದ ಮಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದ.ಕ ಅಥ್ಲೆಟಿಕ್ಸ್  ಅಸೋಸಿಯೇಶನ್ ಸಹಯೋಗದೊಂದಿಗೆ ರೈಸಿಂಗ್ ಚಾಂಪಿಯನ್ಸ್ ಕ್ಯಾಂಪ್ – ೨೦೨೫ ಎಂಬ ಅಥ್ಲೆಟಿಕ್ಸ್ ಸಮ್ಮರ್ ಕ್ಯಾಂಪ್‌ನ ಉದ್ಘಾಟನಾ ಕಾರ್ಯಕ್ರಮವು ನಗರದ ಮಂಗಳಾ ಸ್ಟೇಡಿಯಂನಲ್ಲಿ ನಡೆಯಿತು.

ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡಾಪಟುಗಳಾಗಿ ವಿಶೇಷ ಸಾಧನೆ ಮಾಡಬೇಕೆಂದು ಉದ್ದೇಶದಿಂದ ಅಂತರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಆಗಿರುವ ದಿನೇಶ್ ಕುಂದರ್ ಅವರು ಮಾರ್ಗದರ್ಶನದಲ್ಲಿ ರೈಸಿಂಗ್ ಚಾಂಪಿಯನ್ಸ್ ಕ್ಯಾಂಪ್ – 2025 ಹಮ್ಮಿಕೊಂಡಿದ್ದಾರೆ. ಸಹಾಯಕ ಕೋಚ್ ಆಗಿರುವ ನಾಗರಾಜ್ ಹೆಚ್.ಕೆ, ರಾಯಲ್ ಡಿಸಿಲ್ವಾ, ರೋಶನ್, ತ್ರಿವೇಣಿ, ಹರಿಣಾಕ್ಷಿ, ಜಸ್ಮಿತಾ ಅವರು ಕ್ರೀಡಾ ತರಬೇತಿಯನ್ನು ನೀಡುತ್ತಿದ್ದಾರೆ.

ರೈಸಿಂಗ್ ಚಾಂಪಿಯನ್ಸ್ ಕ್ಯಾಂಪ್ – 2025 ಎಂಬ ಅಥ್ಲೆಟಿಕ್ಸ್ ಸಮ್ಮರ್ ಕ್ಯಾಂಪ್‌ನ ಉದ್ಘಾಟನಾ ಕಾರ್ಯಕ್ರಮವು ನಗರ ಮಂಗಳಾ ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಲೋರೆನ್ಸ್ ಡಿಸೋಜಾ ಅವರು ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ, ಉದ್ಯೋಗದಲ್ಲಿ ವಿಫುಲ ಅವಕಾಶವಿದೆ. ಇಂತಹ ಶಿಬಿರದ ಪ್ರಯೋಜವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು.

ಕ್ರೀಡಾ ಪ್ರವರ್ತಕ ಮತ್ತು ಕ್ರೀಡಾ ಆಡಳಿತಾಧಿಕಾರಿ ಕೆ. ತೇಜೋಮಯ ಅವರು ಮಾತನಾಡಿ, ಮಕ್ಕಳಿಗೆ ಎಳೆಯ ಪ್ರಾಯದಲ್ಲಿ ಕ್ರೀಡಾ ತರಬೇತುಗೊಳಿಸಿದ್ದರೆ, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ, ಅಥ್ಲೆಟಿಕ್ಸ್‌ನ ಮುಖ್ಯ ಕೋಚ್ ಆಗಿರುವ ದಿನೇಶ್ ಕುಂದರ್ ಅವರಲ್ಲಿ ತರಬೇತುಗೊಂಡ ವಿದ್ಯಾರ್ಥಿಗಳು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ದಕ್ಷಿಣ ಕನ್ನಡ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಪ್ರದೀಪ್ ಡಿಸೋಜಾ, ಅವರು ಮಾತನಾಡಿ, ಕ್ರೀಡೆಯಿಂದ ನಮ್ಮ ಜೀವನಕ್ಕೆ ಯಶಸ್ಸು ಖಂಡಿತಾ ಸಿಗುತ್ತದೆ. ನೀವೆಲ್ಲರೂ ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ಉತ್ತಮ ಕ್ರೀಡಾಪಟುಗಳಾಗಿ ಎಂದು ಶುಭ ಹಾರೈಸಿದರು.

ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕೋಚ್ ಆಗಿರುವ ದಿನೇಶ್ ಕುಂದರ್ ಅವರು ಮಾತನಾಡಿ, ಕ್ರೀಡಾ ತರಬೇತಿ ಶಿಬಿರದಲ್ಲಿ ಅಥ್ಲೆಟಿಕ್ಸ್‌ನ ಸ್ಥಾಪಕ ಸದಸ್ಯರನ್ನು ಒಂದುಗೂಡಿಸುವ ಕೆಲಸ ಆಗಿದೆ ಎನ್ನಲು ಹೆಮ್ಮೆ ಇದೆ ಎಂದರು.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಯಾದ ಕ್ರೀಡಾ ಸಾಧಕ ಮನ್ವಿತ್ ಶೆಟ್ಟಿ ಅವರನ್ನು ಗಣ್ಯರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಂಗಳಾ ಅಥ್ಲೆಟಿಕ್ಸ್ ಕ್ಲಬ್‌ನ ಖಜಾಂಜಿ ಸ್ಟೀವನ್ ಡಯಾಸ್, ಅಥ್ಲೆಟಿಕ್ ಅಸೋಸಿಯೇಶನ್‌ನ ಖಜಾಂಜಿ ಕೃಷ್ಣ ಶೆಣೈ, ಮಂಗಳಾ ಅಥ್ಲೆಟಿಕ್ಸ್‌ನ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು, ಉಪಸ್ಥಿತರಿದ್ದರು.

ತರಬೇತುದಾರರಾದ ಹರಿಣಾಕ್ಷಿ ರಾಧಾಕೃಷ್ಣ ಅವರು ಅತಿಥಿಗಳನ್ನು ಸ್ವಾಗತಿಸಿದರು.

Related Posts

Leave a Reply

Your email address will not be published.