ಮಂಗಳೂರು : ರಾಜ್ಯ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಎಸ್.ಜೆ.ಇ.ಸಿ ಮಹಿಳಾ ಥ್ರೋ ಬಾಲ್ ತಂಡವು ರನ್ನರ್ಸ್ ಅಪ್
ವಿಟಿಯು ರಾಜ್ಯ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಎಸ್.ಜೆ.ಇ.ಸಿ ಮಹಿಳಾ ಥ್ರೋ ಬಾಲ್ ತಂಡವು ರನ್ನರ್ಸ್ ಅಪ್ ಆಗಿ ಹೊರಹೊಮ್ಮಿತು.
ಮಂಗಳೂರಿನ ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾ ತಂಡವು ಇತ್ತೀಚೆಗೆ ನಡೆದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಕೆಎಲ್‌ಇಸಿಇಟಿ ಚಿಕ್ಕೋಡಿಯಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ಮಹಿಳಾ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಎಸ್.ಜೆ.ಇ.ಸಿ ಮಹಿಳಾ ಥ್ರೋ ಬಾಲ್ ತಂಡವು ರನ್ನರ್ಸ್ ಅಪ್ ಆಗಿ ಹೊರಹೊಮ್ಮಿತು.
ಈ ಅಗಾಧ ಸಾಧನೆ ಮಾಡಿದ ತಂಡ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಎಸ್.ಜೆ.ಇ.ಸಿ ವತಿಯಿಂದ ಅಭಿನಂದಿಸಲಾಯಿತು.