ಮಂಗಳೂರು: ಎಸ್‌ ವಿಟಿ ಟ್ರೋಫಿ-2025: ಟ್ರೋಫಿ ಮತ್ತು ಜರ್ಸಿ ಬಿಡುಗಡೆ

ಎಸ್‌ವಿಟಿ ವೊಲಂಟೀಯರ್ಸ್ ಅಸೋಸಿಯೇಷನ್ ಹಾಗೂ ಆಭರಣ ಜ್ಯುವೆಲರ್ಸ್ ಜೊತೆ ಪ್ರಸ್ತುತ ಪಡಿಸುತ್ತಿರುವ ಎಸ್‌ವಿಟಿ ಟ್ರೋಫಿ-2025 ಜಿಎಸ್‌ಬಿ ವೊಲಂಟೀಯರ್ಸ್ ಪ್ರೀಮಿಯರ್ ಲೀಗ್ ಸೀಸನ್-3ರ ಟ್ರೋಫಿ ಅನಾವರಣ ಮತ್ತು ಜರ್ಸಿ ಲಾಂಚ್ ನಗರದ ಅಳಕೆಯ ಸಮೀಪದಲ್ಲಿರುವ ಪರ್ಫೆಕ್ಟ್ ಪಾಸ್ ಎಂಬಲ್ಲಿ ನಡೆಯಿತು.

 ಎಸ್ ವಿ ಟಿ ವೊಲಂಟೀಯರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಸುರೇಶ್ ವಿ ಕಾಮತ್ ಅವರು ಟ್ರೋಫಿ ಅನಾವರಣಗೊಳಿಸಿದರು. ನಂತರ ಎಲ್ಲಾ ಕೆಟಗರಿಯ ತಂಡಗಳು ತಮ್ಮ ತಂಡದ ಜರ್ಸಿಯನ್ನು ಲಾಂಚ್ ಮಾಡಿದರು. ಇದೇ ವೇಳೆ ಅಭ್ಯಾಸ ಪಂದ್ಯವು ಆರಂಭಗೊಂಡಿತು.

 ಅಧ್ಯಕ್ಷರಾದ ಸುರೇಶ್ ವಿ ಕಾಮತ್ ಅವರು ಮಾತನಾಡಿ, ಜನವರಿ 11 ಮತ್ತು 12ರಂದು ಕೆನರಾ ಹೈಸ್ಕೂಲ್‌ನ ಸಿಬಿಎಸ್‌ಸಿ ಕ್ಯಾಂಪಸ್‌ನಲ್ಲಿ ಎಸ್ ವಿ ಟಿ ಟ್ರೋಪಿ-೨೦೨೫ ನಡೆಯಲಿದೆ ಎಂದರು.

ಇದೇ ವೇಳೆ ಕಾಶಿ ಮಠಾಧೀಶರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶಾತಾಬ್ದಿಯ ಆರಾಧನೆಯ  ಪ್ರಯುಕ್ತ ಜನವರಿ ೧೦ರಂದು  ನಡೆಯುವ ಕಾರ್ಯಕ್ರಮದ ಬಗ್ಗೆ ಸುರೇಶ್ ವಿ ಕಾಮತ್ ಮಾಹಿತಿ ನೀಡಿದರು. ಆ ದಿನ ಸಾಯಂಕಾಲ6 ಗಂಟೆಗೆ ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದಿಂದ ಶ್ರೀಗಳ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಇರಿಸಿಕೊಂಡು ಕೆನರಾ  ಹೈಸ್ಕೂಲ್ ಮೇನ್ ಸಿಬಿಎಸ್‌ಸಿ  ಕ್ಯಾಂಪಸ್ ನಲ್ಲಿರುವ ಸುಕೃತಿಂದ್ರ  ಕಲಾ ಮಂಟಪ ದಲ್ಲಿ  ಶ್ರೀಗಳ ಗುಣಗಾನ  “ಗುರುವಂದನ” ಕಾರ್ಯಕ್ರಮ ನಡೆಯಲಿದೆ. ಶ್ರೀಗಳು ರಚಿಸಿದ ನಮನ ಪುಸ್ತಕದ ಸ್ತೋತ್ರಗಳ ಸಾಮೂಹಿಕ ಪಠಣ,  ಭಜನಾ ಕಾರ್ಯಕ್ರಮ ನಡೆಯಲಿದ್ದು, ನಂತರ ಶ್ರೀಗಳ ಭಾವಚಿತ್ರಕ್ಕೆ ಮಂಗಳಾರತಿ ತದನಂತರ ಪ್ರಸಾದ ವಿತರಣೆ ನಡೆಯಲಿದೆ. ಸಮಾಜ ಬಾಂಧವರು,  ಎಸ್ ವಿ ಟಿ ವೊಲಂಟೀಯರ್ಸ್ ಅಸೋಸಿಯೇಷನ್ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಕೂಟದ  ವಿವಿಧ ಕೆಟಗರಿಯ ತಂಡದ ಮಾಲಕರು ಹಾಗೂ ಆಟಗಾರರು ಭಾಗವಹಿಸಬೇಕಾಗಿ ವಿನಂತಿಸಿದರು.

 ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎಂ ಕಿರಣ್ ಪೈ ಕಾರ್ಯದರ್ಶಿಯಾದ ಕೆ ಮಂಜುನಾಥ್  ಶೆಣೈ , ಖಜಾಂಚಿ  ಸುಧೀರ್ ಭಗತ್, ಇತರ ಸದಸ್ಯರಾದ ಅಡಿಗೆ ದಾಮೋದರ್ ಶೆಣೈ , ಹರೀಶ್ ಕಾಮತ್, ಬಿ ರಾಮಚಂದ್ರ  ಕಾಮತ್, ಎಂ ನರಸಿಂಹ ಭಟ್, ಉಪಸ್ಥಿತರಿದ್ದರು  ಕೆ ರತ್ನಾಕರ್ ಕುಡ್ವಾ ಅವರು ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.