ಮಂಗಳೂರಿನ ಟೆಂಪೋ ಚಾಲಕ ಮತ್ತು ಮಾಲಕರ ಸಂಘದ ಉದ್ಘಾಟನಾ ಕಾರ್ಯಕ್ರಮ

ಮಂಗಳೂರಿನ ಬಂದರಿನಲ್ಲಿರುವ ಟೆಂಪೋ ಚಾಲಕ ಮತ್ತು ಮಾಲಕರ ಸಂಘದ ಉದ್ಘಾಟನಾ ಕಾರ್ಯಕ್ರಮವು ನಗರದ ಪೋಲಿಸ್ ಲೈನ್‍ನ ನಾಸಿಕ್ ಬಿ. ಎಚ್ ಬಂಗೇರ ಸಭಾ ಭವನದಲ್ಲಿ ನಡೆಯಿತು.

ಸಂಘದ ಲೋಗೋ ಅನವರಣಗೊಳಿಸಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತಾಡಿದ ಮಂಗಳೂರು ಖ್ಯಾತ ವಕೀಲರಾದ ದಿನೇಶ್ ಹೆಗ್ಡೆ ಉಳೆಪ್ಪಾಡಿ ಅವರು.ಸರ್ಕಾರದ ವತಿಯಿಂದ ಇತರ ಚಾಲಕರಿಗೆ ಹಾಗೂ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳು ಟೆಂಪೋ ಚಾಲಕರಿಗೆ ಸಿಗಬೇಕು ಟೆಂಪೋ ಚಾಲಕರನ್ನು ಯಾಕೆ ಕಡೆಗಣಿಸಲಾಗುವುದು ಎಂದು ಪ್ರಶ್ನಿಸಿದರು.

ಸಂಘಟಿತ ಹೋರಾಟಕ್ಕೆ ಬಲವಿದೆ. ಆದ ಕಾರಣ ನೀವೆಲ್ಲರೂ ಒಗ್ಗಟ್ಟಾಗಿ ನಿಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಬೇಕಾಗಿದೆ ಎಂದು ಹೇಳಿದರು.ಈಗ ನೀವು ಮಾಡುವ ಪ್ರಯತ್ನ ಮುಂದೆ ನಿಮಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವೆಕ್ತಪಡಿಸಿದರು.

ಇನ್ನೊರ್ವ ಅಥಿತಿ ಯಾಗಿ ಭಾಗವಹಿಸಿದ ಮಂಗಳೂರು ಮಹಾ ನಗರ ಪಾಲಿಕೆಯ ಸದಸ್ಯರಾದ ಅಬ್ದುಲ್ ಲತೀಫ್ ಮಾತನಾಡಿ ನಿಮ್ಮ ಈ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನಾನು ಕೊಡುತ್ತೇನೆ ಎಂದು ಹೇಳಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.

ತುಳು ನಾಡ ವೇದಿಕೆ ಇದರ ಕಾರ್ಮಿಕ ಘಟಕದ ಅಧ್ಯಕ್ಷ ರಂಜೀತ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಶುಭ ಹಾರೈಸಿದರು.

ಸಂಘದ ಪ್ರಧಾನ ಕಾರ್ಯದರ್ಶಿಯವರಾದ ದೇವದಾಸ್ ಎನ್ ಪೂಜಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಅಥಿತಿಗಳನ್ನು ಸ್ವಾಗತಿಸಿದರು.

ಸಂಘದ ಅಧ್ಯಕ್ಷರಾದ ಮಕ್ಬುಲ್ ಅಹ್ಮದ್ ಕುದ್ರೋಳಿಯವರು ವಿಷಯ ಮಂಡನೆ ಮಾಡಿದರು.

ಇದೇ ವೇಳೆ ಸ್ಟೀಲ್ ಟ್ರೆರ್ಡಸ್ ಎಸೋಸಿಯೇಸನ್ ಇದರ ಕಾರ್ಯದರ್ಶಿಯವರಾದ ಮ್ಯೊದೀನ್ ಸೈಫ್ ರವರು ಸಂಘದ ದ್ವಜವನ್ನು ಅನವರಣ ಗೊಳಿಸಿದರು.ಕಾಸಿಮ್ ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು

Related Posts

Leave a Reply

Your email address will not be published.