ಎರಡು ದಿನಗಳ ಕಾಲ ನಡೆಯಲಿರುವ ಮಂಗಳೂರು ಉತ್ಸವ ಎಕ್ಸ್ ವಿಷನ್ ಕಮ್ ಸೇಲ್

ಮಂಗಳೂರು ಉತ್ಸವ ಎಕ್ಸ್‍ವಿಷನ್ ಕಮ್ ಸೇಲ್ ನಗರದ ಪಾಂಡೇಶ್ವರದ ರೋಸಾರಿಯೋ ಸಾಂಸ್ಕೃತಿಕ ಸಭಾಂಗಣದಲ್ಲಿ ಎರಡು ದಿನ ಕಾಲ ಹಮ್ಮಿಕೊಳ್ಳಲಾಗಿದ್ದು, ಶನಿವಾರದಂದು ಎಕ್ಸ್ ವಿಷನ್ ಕಮ್ ಸೇಲ್‍ಗೆ ಚಾಲನೆ ಸಿಕ್ಕಿತು. ಗೃಹಪ್ರಯೋಗಿ ವಸ್ತುಗಳು, ಮಹಿಳೆಯರ ವಿವಿಧ ಡ್ರೆಸ್ ಮೆಟೀರಿಯಲ್ಸ್ ಗಳು, ಕಾರು, ತಿಂಡಿ ತಿನ್ನಸುಗಳು ಹೀಗೆ ಒಂದೇ ವೇದಿಕೆಯಲ್ಲಿ ಕಾಣ ಸಿಕ್ಕಿತ್ತು. ಎಲ್ಲಾ ಉತ್ಪನ್ನಗಳು ಒಂದೇ ವೇದಿಕೆಯಲ್ಲಿ ಸಿಗುವ ನಿಟ್ಟಿನಲ್ಲಿ ಮಂಗಳೂರು ಉತ್ಸವ ಆಯೋಜಿಸಲಾಗಿದೆ.

ಇನ್ನು ನಗರದ ಪಾಂಡೇಶ್ವರದ ರೋಸಾರಿಯೋ ಸಾಂಸ್ಕೃತಿಕ ಸಭಾಂಗಣದಲ್ಲಿ ಮಂಗಳೂರು ಉತ್ಸವ ಎಕ್ಸ್ ಮಿಷನ್ ಕಮ್ ಸೇಲ್ ಗೆ ಚಾಲನೆ ಸಿಕ್ಕಿತು. ಎರಡು ದಿನಗಳ ಕಾಲ ನಡೆಯಲಿರುವ ಪ್ರದರ್ಶನ ಹಾಗೂ ಸೇಲ್‍ಗೆ ಗಣ್ಯರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಫಾದರ್ ಆಲ್ಫ್ರೆಡ್ ಪಿಂಟೋ ಮಾತನಾಡಿ, ಎಲ್ಲಾ ಬಗೆ ವಸ್ತುಗಳು ಒಂದೇ ವೇದಿಕೆಯಲ್ಲಿ ಸಿಗುವುದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜನಾಬ್ ಮುಫ್ತಿ ಅಬ್ದುಲ್ ಮನ್ನನ್ ಮಾತನಾಡಿ, ಗ್ರಾಹಕರು ದೇವರ ರೂಪದಲ್ಲಿ ಬಂದು ಖರೀದಿ ,ಮಾಡ್ತಾರೆ. ಅವರಿಗೆ ಗೌರವ ನೀಡುವ ಕೆಲಸ ಮಾಡಬೇಕೆಂದರು. ಈ ವೇಳೆ ಕಾರ್ಯಕ್ರಮದ ಸಂಯೋಜಕರಾದ ಮಹಮ್ಮದ್ ಅಖಿಲ್ ಮಾತನಾಡಿ, ಎರಡು ದಿನಗಳ ಕಾಲ ನಡೆಯಲಿರುವ ಪ್ರದರ್ಶನದಲ್ಲಿ ಹಲವು ಮಂದಿ ಭಾಗವಹಿಸಲಿದ್ದಾರೆ . ಬೆಳಿಗ್ಗೆ 10ರಿಂದ ರಾತ್ರಿ 9.30ರತನಕ ಪ್ರದರ್ಶನ ನಡೆಯಲಿದೆ ಎಂದು ಅವರು ನಡೆಯಲಿದೆ ಎಂದು ಅವರು ಹೇಳಿದರು.

ಈ ವೇಳೆ ಕಾರ್ಯಕ್ರಮದ ಸಂಯೋಜಕರಾದ ಮಹಮ್ಮದ್ ಐಯೂಬ್, ಮಹಮ್ಮದ್ ಅಝಲ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಮನೆಗೆ ಉಪಯುಕ್ತವಾದ ಸಾಧನಗಳು, ಅಡುಗೆ ಕಾರ್ಯಕ್ಕೆ ನೆರವಾಗುವ ಬಹುಪಯೋಗಿ ವಸ್ತುಗಳು, ರೆನಾಲ್ಟ್ ಕಾರುಗಳ ಪ್ರದರ್ಶನ, ಡ್ರೆಸ್ ಮೆಟ್ರಿರಿಯಲ್, ವಿವಿಧ ಬಗೆ ಆಹಾರ ಖ್ಯಾದಗಳು, ಐಸ್ ಕ್ರಿಂ ,ಜ್ಯೂಸ್ ಹೀಗೆ ವಿವಿಧ ಮಂಗಳೂರು ಉತ್ಸವ ಎಕ್ಸ್ ಮಿಷನ್ ಕಮ್ ಸೇಲ್ಸ್ ಕಾಣಸಿಗಲಿದೆ.

Related Posts

Leave a Reply

Your email address will not be published.