ಅಡ್ಡೂರಿನಲ್ಲಿ ಸನ್ ಶೈನ್ ಫ್ರೆಂಡ್ಸ್ ವತಿಯಿಂದ ಸಂಭ್ರಮದ ಸ್ವಾತಂತ್ರೋತ್ಸವ
ಮಂಗಳೂರು:- ಸ್ವಾತಂತ್ರ್ಯದ ಅಮೃತೋತ್ಸವದ ಪ್ರಯುಕ್ತ ಮಂಗಳೂರು ಹೊರವಲಯದ ಅಡ್ಡೂರಿನಲ್ಲಿ ಸನ್ ಶೈನ್ ಫ್ರೆಂಡ್ಸ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಮುಖ್ಯ ಅತಿಥಿಗಳಾದ ಎಂ.ಜಿ ಹೆಗ್ಡೆ ( ಶಿಕ್ಷಣತಜ್ಞರು ) ಹಾಗೂ ಯು.ಪಿ ಇಬ್ರಾಹಿಂ ಇವರು ನೆರವೇರಿಸಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ ಶೈನ್ ಫ್ರೆಂಡ್ಸ್ ಅಡ್ಡೂರು ಇದರ ಅಧ್ಯಕ್ಷ ಎ ಕೆ ಹನೀಫ್ ಅವರು ವಹಿಸಿದ್ದರು. ಡಾ ಇ ಕೆ ಎ ಸಿದ್ದೀಕ್ ಅಡ್ಡೂರು, ಜನಾಬ್ ಅಹ್ಮದ್ ಬಾವ ಅಂಗಡಿಮನೆ, ಜನಾಬ್ ಇಕ್ಬಾಲ್ ಎಂ ಐ, ಚಿದಾನಂದ ನಂದ್ಯ ಹಾಗೂ ಊರಿನ ಇನ್ನಿತರ ಗಣ್ಯ ವ್ಯಕ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾಟ್ಸಾಪ್ ಮತ್ತು ಫೇಸ್ಬುಕಲ್ಲಿ ಬರುವ ಇತಿಹಾಸವನ್ನು ತಿರಸ್ಕರಿಸೋಣ: ಎಂ.ಜಿ ಹೆಗಡೆ
ಶಿಕ್ಷಣತಜ್ಞ ಎಂ.ಜಿ ಹೆಗಡೆ ಇವರು ಮುಖ್ಯ ಭಾಷಣ ಮಾಡುತ್ತಾ ನಾವು ಕಲಿಯುವ ಇತಿಹಾಸವು ಈ ದೇಶದ ಒಳಿತಿಗಾಗಿ ಉಪಕಾರವಾಗುವ ಇತಿಹಾಸವಾಗಿರಲಿಯೇ ಒರತು ಈ ಸಮಾಜಕ್ಕೆ ಕೆಡುಕಾಗುವಂತಹ ಯಾವುದೇ ಇತಿಹಾಸವನ್ನು ನಾವು ಸ್ವೀಕರಿಸಿಬಾರದು ಹಾಗೂ ವಾಟ್ಸಾಪ್ ಮತ್ತು ಫೇಸ್ಬುಕ್ ಇತಿಹಾಸವನ್ನೇ ಅದು ಸತ್ಯ ಎಂದು ನಂಬದೆ ಅದರ ಮೂಲವನ್ನು ಅರಿತು ಬಾಳುವರಾಗಬೇಕು ಎಂದು ತನ್ನ ಭಾಷಣದ ಉದ್ದಕ್ಕೂ ಈ ಸಮಾಜದ ಐಕ್ಯತೆಗಾಗಿ ಉತ್ತಮ ಸಂದೇಶವನ್ನು ಅವರು ನೀಡಿದರು.
ಡಾ ಇ ಕೆ ಎ ಸಿದ್ದೀಕ್ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು. ಸನ್ ಶೈನ್ ಫ್ರೆಂಡ್ಸ್ ಇದರ ಸಲಹೆಗಾರರಾದ ಎಂ ಎಸ್ ಹಿದಾಯತುಲ್ಲ ಸ್ವಾಗತಿಸಿದರು ಹಾಗೂ ನಾಸಿರ್ ಮಾಸ್ಟರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.