ದ.ಕ ಜಿಲ್ಲೆಯ ಅಹಿತಕರ ಘಟನೆ ಕಪ್ಪು ಚುಕ್ಕೆಯಾಗಿದೆ, ಮಂಜುಳಾ ವೈ ನಾಯಕ್
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿ ಮಸೂದ್ ಎಂಬ ಯುವಕನ ಕೊಲೆ ನಡೆಯಿತು. ಈ ಕೊಲೆಯ ಹಿನ್ನೆಲೆಯು ಅಥವಾ ಪ್ರತೀಕಾರ ಎಂಬಂತೆ ಪ್ರವೀಣ್ ಎಂಬ ಯುವಕನ ಕೊಲೆ ನಡೆದಿದ್ದು,ಹೀಗಾಗಿ ಒಂದೇ ಒಂದು ದಿವಸ ಅಂತರದಲ್ಲಿ ಸುರತ್ಕಲ್ ಪೇಟೆಯ ಮದ್ಯ ಪಾಜಿಲ್ ಎಂಬ ಯುವಕನ ಕೊಲೆ ನಡೆದಿದ್ದು, ಈ ಎಲ್ಲಾ ವಿಚಾರವನ್ನು ಗಮನಿಸುವಾಗ ಬುದ್ಧಿವಂತ ಜಿಲ್ಲೆಯ ಸುಶಿಕ್ಷಿತರು ಎಂಬ ಹಿರಿಮೆಯನ್ನು ಹೊಂದಿದಂತಹ ಜಿಲ್ಲೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಇವತ್ತು ಪಾತಕಿಗಳ ಕಪಿಮುಷ್ಠಿಗೆ ಸಿಲುಕಿ ಕೆಂಡಾಮಂಡಲವಾಗಿದೆ.ಈ ರೀತಿಯ ಬೆಳವಣಿಗೆಯು ನಮ್ಮ ಜಿಲ್ಲೆಗೆ ಒಂದು ಕಪ್ಪುಚುಕ್ಕೆಯಾಗಿದ್ದು,ಧರ್ಮ,ಜಾತಿ ಎಂಬ ವಿಷ ಬೀಜದಲ್ಲಿ ಸಿಲುಕಿಕೊಂಡಿದ್ದು. ಹಿಂದೂ-ಮುಸ್ಲಿಂ ಕಕ್ರಿಶ್ಚಿಯನ್ ಹಾಗೂ ಇನ್ನಿತರ ಧರ್ಮ ಸಾಮರಸ್ಯವು ಮಾಯವಾಗುತ್ತಿದ್ದು, ಒಬ್ಬರನ್ನೊಬ್ಬರು ಅಪನಂಬಿಕೆಯಿಂದ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಮೊದಲೇ ಕೊರೊನಾ ಮಹಾಮಾರಿಯಿಂದ ಆರ್ಥಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಕುಂಠಿತವಾಗಿದ್ದು ಸ್ವಲ್ಪ ಚೇತರಿಸುವ ಸಂದರ್ಭದಲ್ಲಿ ಪಬ್ ರೆಸ್ಟೋರೆಂಟ್ ಮೇಲೆ ದಾಳಿ ಹಾಗೂ ಅಮಾಯಕರ ಕೊರತೆಯಿಂದಾಗಿ ಇಡೀ ಜಿಲ್ಲೆಯ ಜನತೆ ತಲೆತಗ್ಗಿಸುವಂತಾಗಿದೆ.
ಜಿಲ್ಲಾಡಳಿತ ತಕ್ಷಣ ಸಾಮಾಜಿಕ ಮುಖಂಡರು,ಧರ್ಮ ಗುರುಗಳನ್ನು,ರಾಜಕೀಯ ನೇತಾರರ ಸಭೆ ಕರೆದು ಸಾಮರಸ್ಯ ಹಾಗೂ ಸಾಮಾಜಿಕ ಭದ್ರತೆಯ ವಿಶ್ವಾಸವನ್ನು ನಿರ್ಮಾಣ ಮಾಡಬೇಕೆಂದು ಸಾಮರಸ್ಯ ಮಂಗಳೂರು ಆಗ್ರಹಿಸುತ್ತೇವೆ. ಹಾಗೂ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯದ ಜನರ ಮುಖ್ಯಮಂತ್ರಿಗಳೇ ವಿನಹಾ ಯಾವುದೇ ಒಂದು ಜಾತಿ ಸಮುದಾಯಕ್ಕೆ ಸೀಮಿತರಲ್ಲ ಕೊಲೆಯಾದ ಎಲ್ಲರ ಕುಟುಂಬಸ್ಥರನ್ನು ಭೇಟಿ ಮಾಡಿ ಯಾವುದೇ ತಾರತಮ್ಯವಿಲ್ಲದೆ ಪರಿಹಾರ ನೀಡಬೇಕೆಂದು ಆಗಮಿಸುತ್ತೇವೆ ಹಾಗೂ ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿಯನ್ನು ನೀಡಬೇಕೆಂದು ನಾವು ಆಗ್ರಹಿಸುತ್ತೇವೆ. ರಾಜಕೀಯ ಮುಖಂಡರು ಯಾವುದೇ ದುರುದ್ದೇಶದ ದ್ವೇಷದ ರಾಜಕಾರಣ ಮಾಡದೆ ಜನರಿಗೆ ಸಾಮರಸ್ಯದಿಂದಿರಲು ಶ್ರಮಪಡಬೇಕು ಯಾವುದೇ ಪತ್ರಿಕಾ ಮಾಧ್ಯಮ ಆಗಲಿ ಮೀಡಿಯಾಗಳಾಗಲಿ ಸಂಯಮದಿಂದ ಯಾವುದೇ ಸುದ್ದಿಯನ್ನು ಬಿತ್ತರಿಸುವಾಗ ಸತ್ಯಾಸತ್ಯತೆ ಇರುವ ಸುದ್ದಿಯನ್ನು ಮಾತ್ರ ಪ್ರಸಾರ ಮಾಡಿ ಮಾಡಬೇಕೆಂದು ಆಗ್ರಹಿಸುತ್ತೇವೆ. ಇದರಲ್ಲಿ ಪೊಲೀಸ್ ವೈಫಲ್ಯವು ಎದ್ದು ಕಾಣುತ್ತಿದ್ದು ಈ ಕೊಲೆಯ ಹಿಂದುಗಡೆಯ ಸಮಾಜಘಾತುಕ ಶಕ್ತಿಗಳು ಹಾಗೂ ಕೊಲೆಗಡುಕರಿಗೆ ಆರ್ಥಿಕ ಹಾಗೂ ಇನ್ನಿತರ ಸಹಾಯವನ್ನು ಮಾಡಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಂಡು ಕೊಲೆಯಾದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕಾಗಿ ಆಗ್ರಹಿಸುತ್ತೇವೆ.
ದ್ವೇಷದ ರಾಜಕಾರಣವನ್ನು ಬಿಟ್ಟು ಸಾಮರಸ್ಯ ಸಮಾಜ ನಿರ್ಮಾಣ ಆಗುವಂತಹ ಸ್ಥಿತಿಯು ನಿರ್ಮಾಣ ಆಗಬೇಕೆಂಬ ಆಶಯ ಸಾಮರಸ್ಯ ಮಂಗಳೂರಿನ ಅಪೇಕ್ಷೆ ಸುದ್ದಿಗೋಷ್ಠಿಯಲ್ಲಿ ಸಾಮರಸ್ಯ ಮಂಗಳೂರಿನ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್, ಕೋಶಾಧಿಕಾರಿ ಪ್ರಕಾಶ್ ಬಿ ಸಾಲಿಯಾನ್, ಸಾಮರಸ್ಯ ಮಂಗಳೂರು ಸಂಚಾಲಕರುಗಳಾದ ಮೊಹಮ್ಮದ್ ಕುಂಜತ್ಬೈಲ್, ಸುನಿಲ್ ಬಜಿಲಕೇರಿ ಹಾಗೂ ಯೋಗೀಶ್ ನಾಯಕ್ ಉಪಸ್ಥಿತರಿದ್ದರು.