ಮಂಗಳೂರು : ಅಸ್ತ್ರ ಗ್ರೂಪ್ ವತಿಯಿಂದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳಿಗೆ ಕೊಡೆಗಳ ಹಸ್ತಾಂತರ

ಅಸ್ತ್ರ ಗ್ರೂಪ್ ವತಿಯಿಂದ ಮಂಗಳೂರು ನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳಿಗೆ ಕೊಡೆಗಳನ್ನು ಹಸ್ತಾಂತರಿಸಲಾಯಿತು.
ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜಕ್ಕೆ ಕೊಡುಗೆಗಳನ್ನು ನೀಡುತ್ತಿರುವ ಹಾಗೂ ವಿಶೇಷ ಸಹಾಯವನ್ನು ಮಾಡುತ್ತಿರುವ ಅಸ್ತ್ರ ಗ್ರೂಪ್‌ನ ಸಿಇಒ ಲಂಚುಲಾಲ್ ಕೆ.ಎಸ್ ಅವರು ಟ್ರಾಫಿಕ್ ಸಿಬ್ಬಂದಿಗಳಿಗೆ ಮಳೆಗಾಲದಲ್ಲಿ ಅನುಕೂಲವಾಗಲೆಂದು ಟ್ರಾಫಿಕ್ ಪೊಲೀಸ್ ಅಧಿಕಾರಿಗೆ ಕೊಡೆಗಳನ್ನು ಹಸ್ತಾಂತರಿಸಿದರು.