ಬಸ್ ಚಾಲಕನ ಅಜಾಗರುಕತೆ ಚಾಲನೆಯಿಂದ ಸರಣಿ ಅಪಘಾತ

ಖಾಸಗಿ ಬಸ್ ಚಾಲಕನೊರ್ವ ಏಕಾಏಕಿ ಬಸ್‍ನ್ನು ಹೆದ್ದಾರಿಗಡ್ಡವಾಗಿ ತಿರುಗಿಸಿದ್ದರ ಪರಿಣಾಮ ನಡೆದ ಸರಣಿ ಅಪಘಾತದಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಪಡುಬಿದ್ರಿಯ ಅಪಾಯಕಾರಿ ತಿರುವು ಸಹಿತ ಜಂಕ್ಷನ್‍ನಲ್ಲಿ ಮಂಗಳೂರು ಕಡೆಯಿಂದ ಬಂದ ಖಾಸಗಿ ಬಸ್ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಉಡುಪಿ ಕಡೆಯಿಂದ ಹೆದ್ದಾರಿಯಲ್ಲಿ ವಾಹನಗಳು ಬರುತ್ತಿದ್ದರೂ ಕ್ಯಾರೇ ಎನ್ನದೆ ಏಕಾಏಕಿ ಹೆದ್ದಾರಿಗಡ್ಡವಾಗಿ ಬಸ್ ಚಲಾಯಿಸಿದಾಗ ಹೆದ್ದಾರಿಯಲ್ಲಿ ಬರುತ್ತಿದ್ದ ವಿಆರ್ ಎಲ್ ಕಂಪನಿಯ ಬೃಹತ್ ಲಾರಿ ಡಿಕ್ಕಿಯಾಗಿದ್ದು, ನಿಯಂತ್ರಣ ಕಳೆದುಕೊಂಡ ಬಸ್ ಜಂಕ್ಷನ್ ನಲ್ಲಿದ್ದ ಬೂತ್ ಸಹಿತ ಅಟೋ ರಿಕ್ಷಾ ನಿಲ್ದಾಣದಲ್ಲಿ ನಿಂತಿದ್ದ ರಿಕ್ಷಾವೊಂದನ್ನು ಎಳೆದುಕೊಂಡು ಹೋಗಿ ಪಕ್ಕದ ಎಸ್‍ಬಿಐ ಎಟಿಎಂಗೆ ಡಿಕ್ಕಿಯಾಗುವುದರಲ್ಲಿ ಸ್ವಲ್ಪವೇ ತಪ್ಪಿದೆ. ಬಸ್ಸಿನಲ್ಲಿದ್ದ ಹತ್ತಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂಬುದಾಗಿ ಪ್ರತ್ಯೇಕ್ಷ ಧರ್ಶಿಗಳು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಅಟೋ ನಿಲ್ದಾಣದ ಬಳಿ ಅಟೋ ಚಾಲಕರು ಸಹಿತ ಸಾರ್ವಜನಿಕರು ವಿದ್ಯಾರ್ಥಿಗಳು ಗುಂಪು ಸೇರಿ ನಿಲ್ಲುತ್ತಿದ್ದು ಅದೃಷ್ಟವಶಾತ್ ಯಾರು ಆ ಭಾಗದಲ್ಲಿ ಆ ಸಂದರ್ಭ ಇದ್ದಲ್ಲ ಒಂದು ಕಡೆಯಾದರೆ, ಮತ್ತೊಂದು ಕಡೆ ಅಟೋ ಚಾಲಕ ಕೂಡಾ ಅಟೋ ದಲ್ಲಿ ಇರದ ಕಾರಣ ಈ ಬಾರೀ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Related Posts

Leave a Reply

Your email address will not be published.