ಮಂಗಳೂರು ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೋಲಾಹಲ

ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಕೇವಲ ಚರಂಡಿ ಕಾಂಪೌಂಡ್ ಹಾಲ್ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ಸಾಲ ಪಡೆದಿದ್ದು, ಮಂಗಳೂರು ಪಾಲಿಕೆಯ ಆಡಳಿತದಲ್ಲಿ ಶಾಸಕರ ಹಸ್ತಕ್ಷೇಪವಿದೆ ಎಂಬ ಕಾಂಗ್ರೆಸ್ ಆರೋಪ ಮಂಗಳೂರು ಪಾಲಿಕೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆ ಕೋಲಾಹಲ ಸೃಷ್ಟಿಸಿತು. ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಲದ ವಿಚಾರದ ಚರ್ಚೆಯು ಆಡಳಿತ ಹಾಗೂ ಪ್ರತಿಪಕ್ಷಗಳ ಮಧ್ಯೆ ಸಮರಕ್ಕೆ ಸಾಕ್ಷಿಯಾಯಿತು. ಪ್ರತಿಪಕ್ಷದ ಸದಸ್ಯರು ಮೂರು ಬಾರಿ ಸದನದ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪಾಲಿಕೆಯ ಆರ್ಥಿಕತೆಯ ಬಗ್ಗೆ ಕೂಡಲೇ ಆಡಳಿತ ಪಕ್ಷ ಶ್ವೇತಪತ್ರ ಹೊರಡಿಸಬೇಕೆಂದು ಜಲಸಿರಿ, ಕುಡ್ಸೆಂಪ್ ಸಹಿತ ನಗರಕ್ಕೆ ದೊಡ್ಡ ಯೋಜನೆ ಬರುವಾಗ ಸಾಲ ಮಾಡುವ ಕ್ರಮವಿದೆ. ಆದರೆ ಚರಂಡಿ ಕೆಲಸ ಸಹಿತ ಸಣ್ಣ ಕೆಲಸಕ್ಕೂ ಸಾಲ ಪಡೆಯುವುದು ಸರಿಯಲ್ಲ ಎಂದರು.
