ಬ್ಯಾಂಕಿನಿಂದ 27 ಲಕ್ಷ ರೂ. ಎಗರಿಸಿದ ಆರೋಪಿಗೆ ಜೈಲು ಶಿಕ್ಷೆ

2017ರ ಡಿಸೆಂಬರ್ ತಿಂಗಳ 29ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಇರುವ (ಆಗಿನ) ವಿಜಯ ಬ್ಯಾಂಕ್‍ನಲ್ಲಿ ಕ್ಯಾಶಿಯರ್ ಅಗಿದ್ದ ವಿಕಾಸ್ ಶೆಟ್ಟಿ ರೂ. 27,29,875/- ಎಗರಿಸಿದ್ದರು. ಆ ಶಾಖೆಯ ಮ್ಯಾನೇಜರ್ 2017ರ ಡಿಸೆಂಬರ್ 28ರಿಂದ 30ರ ವರೆಗೆ ರಜೆಯಲ್ಲಿದ್ದರು.
ಪ್ರಭಾರ ಮ್ಯಾನೇಜರ್ ಅವರ ಟ್ಯಾಲಿ ಸಾಫ್ಟ್‍ವೇರ್‍ನಲ್ಲಿ ಅಂತಿಮ ನಗದು ಪರೀಕ್ಷಿಸುವಾಗ ಈ ಮೊತ್ತ ಕಡಿಮೆ ಇದ್ದದ್ದು ಗೊತ್ತಾಗಿತ್ತು.ಆರೋಪಿ ವಿಕಾಸ್ ಶೆಟ್ಟಿಯವರನ್ನು ವಿಚಾರಿಸಿದಾಗ ಅವರು ತಾವು ಹಣ ತೆಗೆದಿರುವುದನ್ನು ಒಪ್ಪಿಕೊಂಡಿದ್ದರು. ಈ ಬಗ್ಗೆ ಬ್ಯಾಂಕಿನ ಪ್ರಾದೇಶಿಕ ಕಚೇರಿಗೆ ಮಾಹಿತಿ ನೀಡಿದ್ದು, ಶಾಖೆಗೆ ಆಗಮಿಸಿದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆರೋಪಿ ವಿಕಾಸ್ ಶೆಟ್ಟಿ ಲಿಖಿತವಾಗಿ ಹಣ ತೆಗೆದಿರುವುದನ್ನು ಒಪ್ಪಿಕೊಂಡಿದ್ದು, ಆ ಹಣವನ್ನು ಮರುದಿನವೇ ಬ್ಯಾಂಕಿಗೆ ಪಾವತಿಸಿದ್ದರು.
ಸಾರ್ವಜನಿಕ ಹಣ ದುರುಪಯೋಗ, ನಂಬಿಕೆ ದ್ರೋಹ ನಡೆಸಿದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಮಂಗಳೂರು ಎಕಾನಮಿಕ್ & ನಾರ್ಕೋಟಿಕ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆದು ಇದೀಗ 2ನೇ ಸಿಜೆಎಂ ನ್ಯಾಯಾಲಯದಲ್ಲಿ ಆರೋಪಿಯ ಆರೋಪ ಸಾಬೀತಾಗಿತ್ತು.ವಾದ ಪ್ರತಿವಾದ ಆಲಿಸಿದ ಮಾನ್ಯ ನ್ಯಾಯಾಧೀಶರಾದ ಮಧುಕರ ಪಿ. ಭಾಗವತ್ ಆರೋಪಿಗೆ ಶಿಕ್ಷೆಯನ್ನು ಪ್ರಕಟಿಸಿದರು.ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್.ಬಿ ವಾದ ಮಂಡಿಸಿದ್ದರು.
ಇನ್ಸ್‍ಪೆಕ್ಟರ್ ರಾಮಕೃಷ್ಣ ಅವರ ನೇತೃತ್ವದಲ್ಲಿ ಮಹಿಳಾ ಹೆಡ್ ಕಾನ್ಸ್‍ಟೇಬಲ್ ಶ್ರೀಲತಾ ಅವರು ಪ್ರಕರಣವನ್ನು ತನಿಖೆ ನಡೆಸುವಲ್ಲಿ ಕಾರ್ಯನಿರ್ಹಿಸಿದ್ದರು.
