ಉಚಿತವಾಗಿ ಗಂಧದ ಗುಡಿ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮೂಲ್ಕಿ

ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಲಾಗಿತ್ತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರು ಕನ್ನಡ ರಾಜ್ಯೋತ್ಸವ ದಿನದಂದು, ಗಂಧದ ಗುಡಿ ಫಿಲ್ಮ್ ಅನ್ನು ಸಿನಿ ಪ್ರೇಕ್ಷಕರಿಗೆ ವೀಕ್ಷಣೆಗೆ ಅವಕಾಶ ಮಾಡುವ ಮೂಲಕ ಅಪ್ಪು ಅಭಿಮಾನವನ್ನು ಈ ಮೂಲಕ ತೋರ್ಪಡಿಸಿದ್ದಾರೆ.

ಅಪ್ಪು ಅಭಿ, ವೀರಕನ್ನಡಿಗನಾಗಿ ಅಭಿಮಾನಿಗಳ ಹೃಯದಲ್ಲಿ ಅಜರಾಮರಾಗಿರುವ ಪುನೀತ್ ಪುನೀತ್ ರಾಜ್ ಕುಮಾರ್ ಗೆ ರಾಜ್ಯದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನವಾಗಿದೆ. ಇದೀಗ ಪುನೀತ್ ರಾಜ್‌ಕುಮಾರ್ ಅಭಿನಯದ ಗಂಧದ ಗುಡಿ ಫಿಲ್ಮ್ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ. ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿ ಮಂಗಳೂರಿನ ಸಿನಿ ಪ್ರಿಯರಿಗೆ , ಸದಾ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮೂಲ್ಕಿ ಅವರು ಸುರತ್ಕಲ್ ನ ಸಿನಿ ಗ್ಯಾಲಕ್ಸಿ ಚಿತ್ರಮಂದಿರದಲ್ಲಿ ಉಚಿತವಾಗಿ ಗಂಧದ ಗುಡಿ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟರು. ಮಕ್ಕಳ ಸಹಿತ ಹಿರಿಯರು ಉಚಿತವಾಗಿ ಫಿಲ್ಮ್ ಅನ್ನು ವೀಕ್ಷಿಸುವಂತಾಯಿತು. ಇನ್ನೂ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿ, ಅಗಲಿದ ನೆಚ್ಚಿನ ನಟನಿಗೆ ನಮಿಸಲಾಯಿತು.

ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಸಿನಿಮಾವೂ ಅರಣ್ಯ, ಪ್ರಾಣಿ, ಪಕ್ಷಿ, ಪರಿಸರ ಕಾಳಜಿಯ ಕುರಿತಾಗಿ ಸಿನಿಮಾ ಮೂಡಿಬಂದಿದೆ. ಸಾಮಾಜಿಕ ಸೇವೆ, ಜವಾಬ್ದಾರಿಯಲ್ಲೂ ಅವರು ಮಕ್ಕಳಿಗೆ ಮಾದರಿಯಾಗಬೇಕೆಂಬ ಸದುದ್ದೇಶದಿಂದ ಸ್ವತಃ ಖರ್ಚಿನಲ್ಲೇ ಉಚಿತವಾಗಿ ಸಿನಿಮಾವನ್ನು ವೀಕ್ಷಣೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮುಲ್ಕಿ ಅವಕಾಶ ಮಾಡಿಕೊಟ್ಟಿದ್ದರು.

ಇನಾಯತ್ ಆಲಿ ಅವರು ಈಗಾಗಲೇ ಹಲವಾರು ಸಮಾಜಮುಖಿ ಕೆಲಸ ಮಾಡಿ, ಸೈ ಎನ್ನಿಸಿಕೊಂಡಿದ್ದಾರೆ. ಬಡವರ ಪರವಾಗಿ ಕೆಲಸ ಮಾಡಿಕೊಂಡಿರುವ ಇವರು, ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ, ಪುನೀತ್ ರಾಜ್ ಅವರ ಗಂಧದ ಗುಡಿ ಸಿನಿಮಾ ವೀಕ್ಷಣೆ ಅವಕಾಶ ಮಾಡಿಕೊಡುವ ಮೂಲಕ ಅಪ್ಪು ಅಭಿಮಾನವನ್ನು ತೋರ್ಪಡಿಸಿಕೊಂಡಿದ್ದಾರೆ. ಹಲವಾರು ಮಂದಿ ಸಿನಿಮಾ ವೀಕ್ಷಣೆಗೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಸಿನಿಮಾ ವೀಕ್ಷಿಸಿದವರಿಗೆ ಸಿಹಿ ತಿಂಡಿಯನ್ನು ನೀಡಲಾಯ್ತು. ಸಿನಿಮಾ ವೀಕ್ಷಣೆಗೆ ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ, ಮುಖಂಡರಾದ ಪೃಥ್ವಿರಾಜ್, ಬಾಷಾ ಗುರುಪುರ,
ಪಂಚಾಯತ್ ಸದಸ್ಯ ಇರ್ಫಾನ್,ರಾಜೇಶ್ ಕುಳಾಯಿ, ರೆಹಮಾನ್ ಖಾನ್, ಸುಹಾನ್ ಆಳ್ವಾ, ಸವಾದ್ ಸುಳ್ಯ ಸೇರಿದಂತೆ ಮೊದಲಾದವರು ಚಿತ್ರ ವೀಕ್ಷಣೆಗೆ ಆಗಮಿಸಿದ್ರು.

ಒಟ್ಟಿನಲ್ಲಿ ಸದಾ ಸಮಾಜ ಮುಖಿ ಚಿಂತನೆಹಾಗೂ ಬಡವರ ಬಗೆ ಕಾಳಜಿ ವಹಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರು, ಇದೀಗ ಕನ್ನಡ ಅಭಿಮಾನವನ್ನು ಪುನೀತ್ ರಾಜ್ ಕುಮಾರ್ ಅಭಿನಯದ ಗಂಧಗುಡಿ ಚಿತ್ರವನ್ನು ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಣೆಗೆಅವಕಾಶ ಒದಗಿಸುವ ಮೂಲಕ, ಇನಾಯತ್ ಆಲಿ ಅವರು ಅಪುö್ಪ ಅಭಿಮಾನ ಹಾಗೂ ಕನ್ನಡ ಪ್ರೀತಿಯನ್ನು ಈ ಮೂಲಕ ತೋರ್ಪಡಿಸಿದ್ದಾರೆ.

Related Posts

Leave a Reply

Your email address will not be published.