ಮಂಗಳೂರು : ಪುತ್ತೂರಿನ ಕಾಣಿಯೂರಿನಲ್ಲಿ ಯುವಕರ ಮೇಲೆ ಗುಂಪೊಂದರಿoದ ಹಲ್ಲೆ

ಇತ್ತೀಚೆಗೆ ಪುತ್ತೂರಿನ ಕಾಣಿಯೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯ ಸೇರಿದ ಇಬ್ಬರು ವ್ಯಾಪಾರಕ್ಕೆ ಹೋದಾಗ ಅವರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದ್ದಾರೆ.

j r lobo

ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ಕಾನೂನಿನ ಸಂಪರ‍್ಣ ವಿಫಲತೆಯನ್ನು ನಾನು ಖಂಡಿಸುತ್ತೇನೆ. ಯುವಕರು ತಮ್ಮ ಹೊಟ್ಟೆಪಾಡಿಗಾಗಿ ಹಳ್ಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದಾರೆ. ಸುಳ್ಳು ಸುದ್ದಿಯನ್ನು ಹಬ್ಬಿಸಿ ಆ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ. ತಪ್ಪು ಮಾಡಿದವರಿಗೆ ಕಾನೂನಡಿಯಲ್ಲಿ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆಗಳಿವೆ. ಹಲ್ಲೆ ಮಾಡಿದ್ದವರ ಮೇಲೆ ಪೊಲೀಸರು ಯಾಕೆ ಕ್ರಮ ಕೈಗೊಂಡಿಲ್ಲ ಮಾಜಿ ಶಾಸಕ ಜೆ.ಆರ್. ಲೋಬೋ ಪ್ರಶ್ನಿಸಿದರು.
ಇನ್ನು ಸುರತ್ಕಲ್ ಟೋಲ್‌ಗೇಟ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿ ಬರೆದಿರುವುದನ್ನು ಖಂಡಿಸಿದರು.

j r lobo

ಈ ಸಂರ‍್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ನಗರ ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಪರಿಶಿಷ್ಟ ಜಾತಿ ಪಂಗಡಗಳ ನಾಯಕರಾದ ಪ್ರೇಮ್, ಜಿಲ್ಲಾ ಪ್ರಧಾನ ಕರ‍್ಯರ‍್ಶಿ ಸುಧೀರ್, ಕರ‍್ಪೋರೇಟರ್ ಆಶ್ರಫ್, ಹಮೀದ್, ಮತ್ತಿತರರು ಉಪಸ್ಥಿತರಿದ್ದರು.
ವರದಿ: ಶರತ್ ಮಂಗಳೂರು

Related Posts

Leave a Reply

Your email address will not be published.