ಮಂಗಳೂರು : ಕಾಂತಾರ ಸಿನಿಮಾ ವೀಕ್ಷಿಸಿದ ಧರ್ಮಸ್ಥಳದ ಖಾವಂದರು

ದೈವದ ಮಹತ್ವ ಸಾರಿದ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಚಿತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕುಟುಂಬಸ್ಥರೊಂದಿಗೆ ಶನಿವಾರ ರಾತ್ರಿ ವೀಕ್ಷಿಸಿದರು.ಮಂಗಳೂರಿನ ಭಾರತ್ ಮಾಲ್ ಬಿಗ್ ಸಿನಿಮಾಸ್‌ನಲ್ಲಿ ರಾತ್ರಿ ಕಾಂತಾರ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಪತ್ನಿ ಮತ್ತು ಕುಟುಂಬ ಸದಸ್ಯರು ಅವರೊಂದಿಗೆ ಚಿತ್ರ ಮಂದಿರಕ್ಕೆ ಆಗಮಿಸಿದ್ದರು. ಚಿತ್ರ ಮಂದಿರದ ಅಧಿಕಾರಿಗಳು ಗೌರವಯುತವಾಗಿ ಧರ್ಮಾಧಿಕಾರಿಯವರನ್ನು ಸ್ವಾಗತಿಸಿದರು.

ದೈವದ ಮಹತ್ವದ ಕಥೆಯ ಚಿತ್ರ ಮಾಡುವ ಮುನ್ನ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರು ಧರ್ಮಸ್ಥಕ್ಕೆ ತೆರಳಿ ಧರ್ಮಾಧಿಕಾರಿಕಾರಿಯವರ ಬಳಿ ಕೇಳಿಕೊಂಡಿದ್ದರು. ಇದೀಗ ಎಲ್ಲೆಡೆ ಜಯಭೇರಿ ಬಾರಿಸುತ್ತಿರುವ ಮಧ್ಯೆ ಧರ್ಮಾಧಿಕಾರಿಗಳು ಬಿಡುವು ಮಾಡಿಕೊಂಡು ಚಿತ್ರ ವೀಕ್ಷಿಸಿದ್ದಾರೆ.ಚಿತ್ರದಲ್ಲಿ ಪಂಜುರ್ಲಿ ಮತ್ತು ಗುಳಿಗ ದೈವದ ಮಹತ್ವ ಮತ್ತು ಪ್ರಭಾವವನ್ನು ತೋರಿಸಲಾಗಿದೆ.
