ಮಂಗಳೂರು:ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಲೂಪಸ್ (ಎಸ್‌ಎಲ್‌ಇ) ಶಿಬಿರ
![](http://v4news.com/wp-content/uploads/2024/12/kmc.jpg)
ಕೆಎಂಸಿ ಆಸ್ಪತೆ ಅತ್ತಾವರದ ಸಂಧಿವಾತ ವಿಭಾಗವು ಲೂಪಸ್ (ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್) ಶಿಬಿರವನ್ನು 20214 ರ ಡಿಸೆಂಬರ್ 2 ರಿಂದ 14 ರವರೆಗೆ ಆಯೋಜಿಸಿದೆ. ಈ ಶಿಬಿರವು ಜನರಲ್ಲಿ ಲೂಪಸ್ ರೋಗದ ಬಗ್ಗೆ ಅರಿವು ಮೂಡಿಸಲು ಮತ್ತು ಈ ಅಟೋ ಇಮ್ಯುನ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮಾಹಿತಿ ಮತ್ತು ಸಮಗ್ರ ಆರೈಕೆಯನ್ನು ಒದಗಿಸುವ ಸಲುವಾಗಿ ಆಸ್ಪತೆ ಯು ಹಮ್ಮಿಕೊಂಡ ಕಾರ್ಯಕ್ರಮವಾಗಿದೆ.
ಲೂಪಸ್ ಕಾಯಿಲೆ ಎಂದರೆ, ದೇಹದ ಪ್ರತಿರಕ ಣಾ ವ್ಯವಸ್ಥೆಯನ್ನೇ ಹದಗೆಡಿಸುವ ದೀರ್ಘಕಾಲೀನ ಅಟೋ ಇಮ್ಯುನ್ ಕಾಯಿಲೆ. ಇದು ಇಡೀ ದೇಹವನ್ನು ಕಾಪಾಡುವ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವಂತ ಕಾಯಿಲೆ ಎಂದು ಹೇಳಬಹುದು. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹಾನಿಕಾರಕ ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ, ಆರೋಗ್ಯಕ್ಕೆ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.
ಆದರೆ ಈ ಲೂಪಸ್ ಕಾಯಿಲೆ ಒಮ್ಮೆ ಆವರಿಸಿಕೊಂಡರೆ, ಕ್ರಮೇಣವಾಗಿ ರೋಗ ನಿರೋಧಕ ಶಕ್ತಿ ಕೂಡ ದುರ್ಬಲವಾಗುತ್ತಾ ಹೋಗುತ್ತದೆ.
ಆರಂಭಿಕ ರೋಗನಿರ್ಣಯ ಮತ್ತು ಸಮಯೋಚಿತ ಚಿಕಿತ್ಸೆಯಿಂದ ಈ ಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ಶಿಬಿರದ ಮೂಲಕ ಜನರಿಗೆ ಲೂಪಸ್‌ನ ಲಕ್ಷಣಗಳು ಮತ್ತು ಅಪಾಯಕಾರಿ ಅಂಶಗಳ ಬಗ್ಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ. ಅದೇ ರೀತಿ ಈ ರೋಗ ಲಕ್ಷಣಗಳಿರುವವರು ವಿಶೇಷ ಸಂಧಿವಾತಶಾಸ್ತ್ರಜ್ಞರನ್ನು ಕಂಡು ಲೂಪಸ್‌ನ ಆರಂಭಿಕ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗುರುತಿಸಿ ನಿಖರವಾದ ರೋಗನಿರ್ಣಯದ ಮೂಲಕ ಚಿಕಿತ್ಸೆಯನ್ನು ಯೋಗಿಸಲು ಸಹಾಯ ಮಾಡಲಿದೆ.
ಶಿಬಿರದಲ್ಲಿ ತಜ್ಞ ಸಂಧಿವಾತ ತಜ್ಞರೊಂದಿಗೆ ಸಮಾಲೋಚನೆ ಉಚಿತವಾಗಿದ್ದು ಅಗತ್ಯ ಪರೀಕ್ಷೆಗಳ ಮೇಲೆ ವಿಶೇಷ ರಿಯಾಯಿತಿಯನ್ನು ಕೂಡ ನೀಡಲಾಗುವುದು.
ಹೆಚ್ಚಿನ ಮಾಹಿತಿ ಮತ್ತು ಅಪಾಯಿಂಟ್‌ಮೆಂಟ್‌ಗಾಗಿ ಕರೆ ಮಾಡಿ: 88615 86249