ಮಂಗಳೂರಲ್ಲಿ ಪಬ್ ಭಜರಂಗದಳ ದಾಳಿ ವಿಚಾರ ಯಾವುದೇ ದೈಹಿಕ ಹಲ್ಲೆ ನಡೆದಿಲ್ಲ ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿಕೆ

ಪಬ್ ಮೇಲೆ ಬಜರಂಗದಳ ದಾಳಿ ಘಟನೆ ಸಂಬಂಧಿಸಿ ಹೇಳಿಕೆ ನೀಡಿರುವ ಪೆÇಲೀಸ್ ಕಮಿಷನರ್ ಶಶಿಕುಮಾರ್, ನಗರದಲ್ಲಿ ಯಾವುದೇ ಪಬ್ ಅಟ್ಯಾಕ್ ಆಗಿಲ್ಲ. ಅಪ್ರಾಪ್ತ ಯುವಕ- ಯುವತಿಯರು ಇದ್ದರೆಂದು ಆಕ್ಷೇಪ ಎತ್ತಿದ್ದರು ಅಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ.
ಇಂದು ಬೆಳಗ್ಗೆ ಬಲ್ಮಠದ ಪಬ್ ಆವರಣಕ್ಕೆ ಬಂದು ಪರಿಶೀಲನೆ ನಡೆಸಿದ ಕಮಿಷನರ್‍ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ರಾತ್ರಿ ಹತ್ತು- ಹನ್ನೆರೆಡು ಮಂದಿ ಪಬ್ ಮುಂಭಾಗದಲ್ಲಿ ಜಮಾಯಿಸಿದ್ದರು. ಪಬ್ ಒಳಗೆ ಅಪ್ರಾಪ್ತರು ಮದ್ಯ ಸೇವನೆ ಮಾಡುತ್ತಿದ್ದರು ಎಂಬ ಆರೋಪ ಅವರದ್ದಿತ್ತು. ಈ ಬಗ್ಗೆ ಬೌನ್ಸರ್ ಜೊತೆ ಯುವಕರು ಮಾತನಾಡಿದ್ದರು. ಬೌನ್ಸರ್ ಬಳಿಕ ಪಬ್ ಮ್ಯಾನೇಜರ್ ಜೊತೆ ಮಾತನಾಡಿ ಪಬ್ ಒಳಗಿದ್ದ ಅಪ್ರಾಪ್ತ ವಿದ್ಯಾರ್ಥಿಗಳನ್ನು ಐಡಿ ಏನಾದ್ರೂ ಇದೆಯೇ ಎಂದು ಪರಿಶೀಲನೆ ಮಾಡಿ, ಹೊರಗೆ ಕಳುಹಿಸಿದ್ದಾನೆ. ಇಲ್ಲಿ ಯಾವುದೇ ಅಟ್ಯಾಕ್ ಆಗಲೀ, ದೈಹಿಕ ಹಲ್ಲೆಗಳು ನಡೆದಿಲ್ಲ. ಪಬ್ ಒಳಗೆ ಯಾರೂ ಪ್ರವೇಶ ಮಾಡಿಲ್ಲ ಎಂದು ಹೇಳಿದ್ದಾರೆ.

ಸಿಸಿಟಿವಿ ಪರಿಶೀಲನೆ ನಡೆಸಲಾಗುವುದು. ಪಬ್ ಮಾಲೀಕ ಮುಂಬೈ ಮೂಲದವರಾಗಿದ್ದು ಅವರಲ್ಲಿಯೇ ಸಿಸಿಟಿವಿ ಪಾಸ್ ವರ್ಡ್ ಇದೆ ಎಂದು ಸಿಬಂದಿ ಮಾಹಿತಿ ನೀಡಿದ್ದಾರೆ. ಅವರನ್ನು ಸಂಪರ್ಕಿಸಲಾಗಿದೆ. ಇಲ್ಲಿ ಏನೇನು ಕಾನೂನು ವಿರೋಧಿ ಕೃತ್ಯ ಆಗಿದೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಬಗ್ಗೆ ಕಾಲೇಜಿನ ಆಡಳಿತದ ಜೊತೆ ಸಂಪರ್ಕ ಮಾಡಿ, ಅವರನ್ನು ಕರೆಸಿ ಹೇಳಿಕೆ ಪಡೆಯಲಾಗುವುದು. ಏನಾದ್ರೂ ಹಲ್ಲೆಯಂತಹ ಘಟನೆ ನಡೆದಿದ್ದರೆ, ಕ್ರಮ ಜರುಗಿಸುತ್ತೇವೆ. ಕೆಲವೊಂದು ಪಬ್, ರೆಸ್ಟೋರೆಂಟ್ ಗಳಲ್ಲಿ 21 ವರ್ಷದ ಒಳಗಿನವರಿಗೆ ಲಿಕ್ಕರ್ ಸರ್ವ್ ಮಾಡಲಾಗುತ್ತಿದೆ ಎನ್ನುವ ಮಾಹಿತಿಯಿತ್ತು. ಅದರ ಬಗ್ಗೆ ಪೆÇಲೀಸ್ ಇಲಾಖೆಯಿಂದ ಆಗಾಗ ಪರಿಶೀಲನೆ ಕಾರ್ಯ ನಡೆಸಲಾಗುವುದು. ಇತ್ತೀಚೆಗೆ ಎರಡು ತಿಂಗಳ ಹಿಂದೆ ಪಬ್ ಒಂದಕ್ಕೆ ದಾಳಿ ನಡೆಸಿ, ಅಕ್ರಮ ಇರುವುದನ್ನು ಪತ್ತೆಮಾಡಿ ಪ್ರಕರಣ ದಾಖಲಿಸಲಾಗಿತ್ತು. ಹಾಗಂತ, ಯಾವುದೇ ಖಾಸಗಿ ವ್ಯಕ್ತಿಗಳು, ಸಂಘಟನೆಗಳು ಪಬ್ ಒಳಗೆ ಬಂದು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇಲ್ಲ ಎಂದರು. ಇಲ್ಲಿನ ಪಬ್ ಪಾರ್ಟಿ ನಿಲ್ಲಿಸಿದ ಘಟನೆಗೂ ಇತ್ತೀಚಿನ ಕಿಸ್ ಪಂದ್ಯ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಕಿಸ್ ಪ್ರಕರಣದಲ್ಲಿ ವಶಕ್ಕೆ ಪಡೆದ ಆರೋಪಿಗಳು ಇಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ಕೆಲವರು ಜಾಲತಾಣದಲ್ಲಿ ಹಾಕ್ಕೊಂಡಿದ್ದರು. ಆ ಪ್ರಕರಣದಲ್ಲಿ ಭಾಗಿಯಾದವರು ಯಾರು ಕೂಡ ನಿನ್ನೆ ಪಬ್ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಘಟನೆ ಬಗ್ಗೆ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ನಗರ ಪೆÇಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ಇದೇ ವೇಳೆ, ಅಪ್ರಾಪ್ತ ಯುವಕ- ಯುವತಿಯರಿಗೆ ಮದ್ಯ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬಂದರು ಪೆÇಲೀಸರು ಪಬ್ ಮ್ಯಾನೇಜರ್ ಮತ್ತು ಇನ್ನೊಬ್ಬ ಸಿಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಡಿಸಿಪಿಯಾದ ಅಂಶುಕುಮಾರ್,ಎಸಿಪಿ ಪರಮೇಶ್ವರ ಹೆಗಡೆ, ಬಂದರು ಠಾಣೆ ಇನ್ಸ್‍ಪೆಕ್ಟರ್ ರಾಘವೇಂದ್ರ ಬೆಂದೂರು ಉಪಸ್ಥಿತರಿದರು.

Related Posts

Leave a Reply

Your email address will not be published.