ನ್ಯಾಯಾದೀಶರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಬಾವೀ ತಯಾರಿ ತರಬೇತಿ ಶಿಬಿರದ ಉದ್ಘಾಟನೆ

ಮಂಗಳೂರು ವಕೀಲರ ಸಂಘದ ವತಿಯಿಂದ ಮುಂಬರುವ ನ್ಯಾಯಾದೀಶರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಬಾವೀ ತಯಾರಿ ತರಬೇತಿ ಶಿಬಿರದ ಉದ್ಘಾಟನೆಯನ್ನು ದ. ಕ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಶ್ರೀ. ರವೀಂದ್ರ ಎo. ಜೋಶಿ ಯವರು ದಿನಾಂಕ 8.7.2022ರಂದು ಉದ್ಘಾಟಿಸಿದರು. ಯುವ ನ್ಯಾಯವಾದಿಗಳು ಇಂತಹ ಕಾರ್ಯಕ್ರಮಗಳ ಉಪಯೋಗವನ್ನು ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ನುಡಿದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಪ್ರಥ್ವಿರಾಜ್ ರೈ ಸ್ವಾಗತಿಸಿ, ಉಪಾಧ್ಯಕ್ಷರಾದ ಮನೋರಾಜ್ ರಾಜೀವ ಅವರು ಪ್ರಸ್ತಾವನೆ ಮಾತುಗಳನ್ನು ಆಡಿ, ಪ್ರಧಾನ ಕಾರ್ಯದರ್ಶಿ ಶ್ರೀ.ಶ್ರೀಧರ ಎಣ್ಮಕಜೆ ವಂದಿಸಿದರು. ಸಂಘದ ಹಿರಿಯ ಕಿರಿಯ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಕ್ರಂ ಪಡ್ವೇಟ್ನಾಯ ಕಾರ್ಯಕ್ರಮ ನಿರೂಪಿಸಿದರು