ಖೋಟಾ ನೋಟು ಚಲಾವಣೆ ಆರೋಪ : ಇಬ್ಬರು ಆರೋಪಿಗಳ ಬಂಧನ

ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇರೆಗೆ ಕದ್ರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಮಂಗಳವಾರ ತನ್ನ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಂಧಿತರನ್ನು ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ನಿಜಾಂ ( 32 ), ಜೆಪ್ಪು ಮಂಗಳೂರು ನಿವಾಸಿ ರಜೀಮ್ ಅಲಿಯಾಸ್ ರಾಫಿ ( 31) ಎಂದು ಗುರುತಿಸಲಾಗಿದೆ. ಜ. 2ರಂದು ಮಂಗಳೂರು ನಗರದ ನಂತೂರು ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಸಮಯ, ನಂತೂರು ಕಡೆಯಿಂದ ಬಂದ, ಒಂದು ಸ್ಕೂಟರ್ ನಲ್ಲಿ ಇಬ್ಬರು ಸದಾರರು ಸಮವಸ್ತ್ರದಲ್ಲಿದ್ದ ಪೆÇಲೀಸರನ್ನು ಕಂಡು, ಅತೀ ವೇಗವಾಗಿ ಚಲಾಯಿಸಿ ಪೊಲೀಸರಿಂದ ತಪ್ಪಿಕೊಳ್ಳಲು ಪ್ರಯತ್ನಿಸಿದ್ದರು. ಆಗ ಮಂಗಳೂರು ಪೂರ್ವ ಠಾಣೆಯ ಪೆÇಲೀಸರು ತಡೆದು ಪರಿಶೀಲಿಸಿ. ಅವರ ವಶದಲ್ಲಿದ್ದ ರೂ. 500 ಮುಖಬೆಲೆಯ ರೂ. 4,50,000/- ಖೋಟಾ ನೋಟುಗಳನ್ನು ಪತ್ತೆ ಹಚ್ಚಿ, ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನೋಟು ನೋಟುಗಳನ್ನು ಬೆಂಗಳೂರಿನಿಂದ ಡ್ಯಾನಿಯಲ್ ಎಂಬಾತನಿಂದ ಪಡೆದು, ಅವುಗಳನ್ನು ಮಂಗಳೂರು ನಗರದಲ್ಲಿ ನೋಟುಗಳನ್ನು ಚಲಾವಣೆ ಮಾಡುವ ಬಗ್ಗೆ, ಆರೋಪಿಗಳು ಮಂಗಳೂರು ದಕ್ಷಿಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಲಿಗೆ ಮಾಡಿದ ಸ್ಕೂಟರ್ ನಲ್ಲಿ ಅವುಗಳನ್ನು ಚಲಾವಣೆಗೆ ಕೊಂಡು ಹೋಗುತ್ತಿದ್ದ ಸಮಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿತರ ಬಗ್ಗೆ ಇನ್ನೂ ಹೆಚ್ಚಿನ ವಿಚಾರಣೆ ಅಗತ್ಯ ಎದ್ದು ಪೊಲೀಸ್ ಕನ್ನೆಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಅಂಶು ಕುಮಾರ್, ದಿನೇಶ್ ಕುಮಾರ್, ಎಸಿಪಿ ರವೀಶ್ ಉಪಸ್ಥಿತರಿದ್ದರು.
