ಮಂಜೇಶ್ವರ: ಮೂಡಂಬೈಲ್ ದಡ್ಡಂಗಡಿ ತರವಾಡು ಟ್ರಸ್ಟ್‌ನವರು ನೂತನವಾಗಿ ನಿರ್ಮಿಸಿದ ಶ್ರೀ ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ ಮೂಡಂಬೈಲ್ ದಡ್ಡಂಗಡಿ ತರವಾಡು ಟ್ರಸ್ಟ್‌ನ ದಡ್ಡಂಗಡಿ ಕುಟುಂಬಸ್ಥರು ನೂತನವಾಗಿ ನಿರ್ಮಿಸಿದ ಶ್ರೀ ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಏಪ್ರಿಲ್ 10 ಮತ್ತು 11ರಂದು ನಡೆಯಲಿದೆ.

ನಾಗದೇವರ ಪುನರ್ ಪ್ರತಿಷ್ಟ  ಬ್ರಹ್ಮಕಲಶದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ದಡ್ಡಂಗಡಿ ಶ್ರೀಮಹಾ ವಿಷ್ಣು ದೇವಸ್ಥಾನದಲ್ಲಿ ದೇವರ ಮಹಾ ಪೂಜೆಯ ಬಳಿಕ ನೆರವೇರಿತು.

ಈ ಸಂದರ್ಭದಲ್ಲಿ ಬಾಲಕೃಷ್ಣ ಭಂಡಾರಿ ದಡ್ಡಂಗಡಿ, ಶಂಕರ್ ಶೆಟ್ಟಿ, ಮಂಜುನಾಥ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಐತಪ್ಪ ಶೆಟ್ಟಿ, ಗಂಗಾಧರ ಆಳ್ವ ಮತ್ತಿತರು ಗಣ್ಯರುಗಳು ಉಪಸ್ಥಿತರಿದ್ದರು.

ವೇದಮೂರ್ತಿ ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲಕೃಷ್ಣ ತಂತ್ರಿಗಳ ಮತ್ತು ಬ್ರಹ್ಮಶ್ರೀ ವೇದಮೂರ್ತಿ ದಡ್ಡಂಗಡಿ ಬಾಲಕೃಷ್ಣ ಭಟ್ ಅವರು ನೇತೃತ್ವದಲ್ಲಿ ವಿವಿಧ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಏ.೧೦ರಂದು ಕುಣಿತ ಭಜನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನ ಪ್ರಸಾದ ವಿತರಣೆ ನಡೆಯಲಿದೆ.

ಏ.೧೧ರಂದು ಗಣಪತಿ ಹೋಮ, ಪ್ರತಿಷ್ಠಾ ಹೋಮ, ಶ್ರೀ ನಾಗದೇವರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಧಾರ್ಮಿಕ ಸಭೆಯಲ್ಲಿ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳು. ಬ್ರಹ್ಮಶ್ರೀ ವೇದಮೂರ್ತಿ ದಡ್ಡಂಗಡಿ ಬಾಲಕೃಷ್ಣ ಭಟ್, ದಡ್ಡಂಗಡಿ ತರವಾಡು ಟ್ರಸ್ಟ್‌ನ ಗೌರವಾಧ್ಯಕ್ಷರಾದ ಬಾಲಕೃಷ್ಣ ಭಂಡಾರಿ, ಹೇರಂಬ ಇಂಡಸ್ಟ್ರೀಸ್‌ನ ಸ್ಥಾಪಕಾಧ್ಯಕ್ಷರಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಐಲ ಶ್ರೀ ದುರ್ಗಾಪರಮೇಶ್ವರೊ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾರಾಯಣ ಹೆಗ್ಡೆ ಕೋಡಿಬೈಲ್, ದಾಮೋದರ ಶೆಟ್ಟಿ ಮಜಿಬೈಲ್, ಬ್ರಹ್ಮಶ್ರೀ ವೇದಮೂರ್ತಿ ದಡ್ಡಂಗಡಿ ಬಾಲಕೃಷ್ಣ ಭಟ್ ಅವರ ಸಮ್ಮುಖದಲ್ಲಿ ನಡೆಯಲಿದೆ.

Related Posts

Leave a Reply

Your email address will not be published.