ಮಂಜೇಶ್ವರ: ಹೊತ್ತಿ ಉರಿದ ಎಂಎಫ್ ಫ್ರೇಂ ವರ್ಕ್ ಪ್ಲೈವುಡ್ ಕಾರ್ಖಾನೆ: ಭಾರೀ ಪ್ರಮಾಣದ ಸಾಮಾಗ್ರಿಗಳು ನಾಶ
ಮಂಜೇಶ್ವರ: ಮಂಜೇಶ್ವರ ಬಟ್ಟಿ ಪದವಿನಲ್ಲಿ ಕಾಯಾಚರಿಸುತ್ತಿರುವ ಎಂ ಎಫ್ ಫ್ರೇಂ ವರ್ಕ್ ಕಾರ್ಖಾನೆಯಲ್ಲಿ ಶನಿವಾರ ಸಂಜೆ ವೇಳೆಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದರ ಪರಿಣಾಮವಾಗಿ, ಕಾರ್ಖಾನೆ ಬಹುತೇಕ ಹೊತ್ತಿ ಉರಿದು ಭಾರೀ ಪ್ರಮಾಣದ ಸಾಮಾಗ್ರಿಗಳು ನಾಶಗೊಂಡಿದೆ.
ಮಾಹಿತಿ ಅರಿತು ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ಸುಗೊಂಡಿದ್ದಾರೆ.
ಮಂಗಳೂರು ನಿವಾಸಿಗಳಾದ ಎಕೆ ನಿಯಾಸ್ ಹಾಗೂ ಅನಿಲ್ ಕುಮಾರ್ ರವರ ಮಾಲಕತ್ವದಲ್ಲಿರುವ ಕಾರ್ಖಾನೆ ಬೆಂಕಿಗಾಹುತಿಯಾಗಿದೆ. ಸುಮಾರು 7 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಹೇಳಲಾಗುತಿದ್ದರೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.