ಮಂಜೇಶ್ವರದ ಜೋಡುಕಲ್ಲಿನಲ್ಲಿ ಅಕ್ರಮ ಮರಳು ದಂಧೆ : 3 ಟಿಪ್ಪರ್ ಲಾರಿಗಳ ವಶ

ಮಂಜೇಶ್ವರ: ಜೋಡುಕಲ್ಲಿನ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಮಂಜೇಶ್ವರ ಪೊಲೀಸರು ನಡೆಸಿದ ದಾಳಿಯಲ್ಲಿ 3 ಟಿಪ್ಪರ್ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅನಧಿಕೃತ ಮರಳಿನ ದಿಬ್ಬವನ್ನು ಕೆಡವಲಾಯಿತು. ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಜೇಶ್ವರ ಎಸ್ಸೈ ಅನ್ಸಾರ್ ರವರ ನೇತೃತ್ವದಲ್ಲಿ ದಾಳಿ ನಡೆದಿದೆ.

ಮರಳು ಸಾಗಾಟಕ್ಕೆ ಬಂದಿದ್ದ ಮೂರು ಟಿಪ್ಪರ್ ಲಾರಿಗಳನ್ನು ವಶಕ್ಕೆ ತೆಗೆಯಲಾಗಿದೆ. ಮೂವರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅನಧಿಕೃತ ಮರಳು ಸಾಗಾಟಕ್ಕೆ ರಸ್ತೆ ನಿರ್ಮಿಸಿ ಕೊಟ್ಟವರ ವಿರುದ್ಧ ಕೂಡಾ ಪ್ರಕರಣ ದಾಖಲಾಗಿದೆ. ಜೆಸಿಬಿ ಮೂಲಕ ಅನಧಿಕೃತ ಮರಳು ಕಡವನ್ನು ನಾಶಗೊಳಿಸಲಾಗಿದೆ