ಮಂಜೇಶ್ವರ : ವಿವಿಧ ಬೇಡಿಕೆ ಮುಂದಿಟ್ಟು ಪಡಿತರ ವರ್ತಕರಿಂದ ಧರಣಿ
ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಡಿತರ ವರ್ತಕರು ಮಂಜೇಶ್ವರಂ ತಾಲೂಕು ಕಚೇರಿಯಲ್ಲಿ ಧರಣಿ ನಡೆಸಿದರು.ಇ-ಪೆÇೀಸ್ ಮಿಷನ್ ಸರಿಯಾಗಿ ಕೆಲಸ ಮಾಡಲು ವ್ಯವಸ್ಥೆ ಕಲ್ಪಿಸಬೇಕು, ಪಡಿತರ ವರ್ತಕರು ಇ- ಪೋಸ್ ಮಿಷನ್ ಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಕೇರಳ ವಿಧಾನಸಭೆಯಲ್ಲಿ ಸಚಿವರ ದಿಕ್ಕು ತಪ್ಪಿಸುವ ಹೇಳಿಕೆ ಹಿಂಪಡೆಯಬೇಕು, ಪಡಿತರ ವರ್ತಕರ ವೇತನ ಪರಿಷ್ಕರಣೆ ಮಾಡಬೇಕು, ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಕಮಿಷನ್ ನೀಡದೆ ಕಿಟ್ ಕಮಿಷನ್ ವಿಳಂಬ ಮಾಡುವುದನ್ನು ನಿಲ್ಲಿಸಿ. ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಪಡಿತರ ವರ್ತಕರು ಧರಣಿ ನಡೆಸಿದರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರಹಿಮಾನ್ ಧರಣಿಗೆ ಚಾಲನೆ ನೀಡಿದರು. ಈ ಸಂದರ್ಭ ನೇತಾರರು ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಧರಣಿಯಲ್ಲಿ ಪಾಲ್ಗೊಂಡರು.