ಗ್ರೈಂಡರ್ ಗೆ ಶಾಲು ಸಿಲುಕಿ ಯುವತಿ ದಾರುಣ ಸಾವು

ಮಂಜೇಶ್ವರ: ಹುಟ್ಟು ಹಬ್ಬದಂದೇ ಗ್ರೈಂಡರ್ ಗೆ ಶಾಲು ಸಿಲುಕಿ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ. ತೂಮಿನಾಡು ಲಕ್ಷಂ ವೀಡು ಕಾಲನಿ ನಿವಾಸಿ ರಂಜನ್ ಕುಟ್ಟ ಎಂಬವರ ಪತ್ನಿ ಜಯಶೀಲ ಚುಮ್ಮಿ (20) ಸಾವನ್ನಪ್ಪಿದ ದುರ್ದೈವಿ. ಈಕೆ ತೂಮಿನಾಡಿನಲ್ಲಿರುವ ಬೇಕರಿಯೊಂದರ ನೌಕರಿಯಾಗಿದ್ದು ಎಂದಿನಂತೆ ಬೇಕರಿಗೆ ತೆರಳಿ ಗ್ರೈಂಡರ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮಧ್ಯೆ ಶಾಲು ಗ್ರೈಂಡರ್ ಗೆ ಸಿಲುಕಿ ದುರಂತ ಸಂಭವಿಸಿದೆ.

ಹುಟ್ಟು ಹಬ್ಬದ ದಿನವಾದ ಹಿನ್ನೆಲೆಯಲ್ಲಿ ಮಾಲೀಕನಲ್ಲಿ ಇವತ್ತು ಬರುವುದಿಲ್ಲವೆಂದು ಹೇಳಿದ್ದರೂ ಪುನಃ ಆಕೆ ಬಂದಿದ್ದಾಳೆನ್ನಲಾಗಿದೆ. ಬೇಕರಿಯಲ್ಲಿ ಬೇರೆ ಯಾರೂ ಇಲ್ಲದೇ ಇರುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಮಾಹಿತಿ ಅರಿತು ಸೇರಿದ ಸ್ಥಳೀಯರು ಆಸ್ಪತ್ರೆ ಕೊಂಡೊಯ್ಯುತ್ತಿರುವ ಮಧ್ಯೆ ಸಾವು ಸಂಭವಿಸಿದೆನ್ನಲಾಗಿದೆ.ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಆಸ್ಪತೈಗೆ ಸಾಗಿಸಲಾಗಿದೆ. ಯುವತಿಯ ದುರಂತ ಸಾವಿನಿಂದ ಊರೇ ಶೋಕ ಸಾಗರದಲ್ಲಿ ಮುಳುಗಿದೆ.
