ಮಂಜೇಶ್ವರ – ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಿಸದ ವಿಚಾರ : ಜನತೆಯ ಆಕ್ರೋಶ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದ ಮೇಲ್ದರ್ಜೆಗೇರಿಸುವಿಕೆ ಪುಟ್ ಓವರ್ ಬ್ರಿಡ್ಜ್ ಹಾಗೂ ಅತ್ಯವಶ್ಯಕ ರೈಲುಗಳ ನಿಲುಗಡೆಗೆ ಸಂಬಂಧಿಸಿದಂತೆ ಮಂಜೇಶ್ವರದ ಜನರಿಗೆ, ಜನಪ್ರತಿನಿಧಿಗಳು ನೀಡಿದ ವಾಗ್ದಾನಗಳು ಕಡತಗಳಲ್ಲೇ ಬಾಕಿ ಉಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ವರ್ಷಗಳ ಹಿಂದೆ ರೈಲು ನಿಲ್ದಾಣದ ಹಳಿ ದಾಟುತ್ತಿದ ವೇಳೆ ಸಂಭವಿಸಿದ ಅಪಘಾತದಲ್ಲಿ ಆಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈ ವಿಚಾರವಾಗಿ ಜನರನ್ನು ಸಮಾಧಾನ ಪಡಿಸಲು ಡಂಗುರ ಸಾರುತ್ತಿದ್ದ ಜನಪ್ರತಿನಿಧಿಗಳು ನಾಪತ್ತೆಯಾಗಿದ್ದಾರೆ ಎಂದು ಜನತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳಕ್ಕೆ ಸಂಚರಿಸುವ ಮೊತ್ತ ಮೊದಲ ರೈಲು ನಿಲ್ದಾಣ ಮಂಜೇಶ್ವರದಲ್ಲಿ ಈ ತನಕ ಯಾವುದೇ ಅಭಿವೃದ್ಧಿಯನ್ನು ಕಾಣದೆ ಇರುವುದಕ್ಕೆ ನಾಗರಿಕರು ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published.