ಮಂಜೇಶ್ವರ : ಸರ್ಕಾರಿ ಶಾಲೆಗೆ ಮಲೆಯಾಳ ಶಿಕ್ಷಕರ ನೇಮಕ ವಿರುದ್ಧ ಪ್ರತಿಭಟನೆ

ಮಂಜೇಶ್ವರ: ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮಕ್ಕೆ ಮತ್ತೆ ಮಲಯಾಳ ಶಿಕ್ಷಕರ ನೇಮಕ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ.ನೇಮಕಾತಿ ವಿರೋಧಿಸಿ ಶಾಲಾ ವಿದ್ಯಾರ್ಥಿಗಳು, , ಶಾಲಾ ರಕ್ಷಕ – ಶಿಕ್ಷಕ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕಳೆದ ವರ್ಷವೂ ಫಿಸಿಕಲ್ ಸಯನ್ಸ್ ಗೆ ಮಲಯಾಳಿ ಶಿಕ್ಷಕ ರನ್ನು ನೇಮಕ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಇದರಿಂದ ನೇಮಕಾತಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು.

ಇದೀಗ ಮತ್ತೆ ತಿರುವನಂತಪುರ ಮೂಲದ ಮಲಯಾಳ ಶಿಕ್ಷಕನನ್ನು ನೇಮಕ ಮಾಡಲಾಗಿದ್ದು, ಈ ಆದೇಶ ವಿರುದ್ಧ ಕನ್ನಡಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ.ಮಲಯಾಳಂ ದೈಹಿಕ ವಿಜ್ಞಾನ ಶಿಕ್ಷಕರನ್ನು ನೇಮಿಸುವ ಶಿಕ್ಷಣ ಇಲಾಖೆಯ ನೀತಿಯನ್ನು ವಿರೋಧಿಸಿ ವಿದ್ಯಾರ್ಥಿಗಳು, ಪೆÇೀಷಕರು ಮತ್ತು ಪಿಟಿಎ ಸದಸ್ಯರು ಜಿಎಚ್‍ಎಸ್‍ಎಸ್ ಅಂಗಡಿಮೊಗರಿನಲ್ಲಿ ಪ್ರತಿಭಟನೆ ನಡೆಸಿದರು.ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಇಂತಹ ನೇಮಕಾತಿ ಆದೇಶದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾದ ಕಾರಣ ಆ ಆದೇಶ ಜಾರಿಯಾಗಿರಲಿಲ್ಲ.ಬಶೀರ್ ಕೋಡುತಾಳ್ ಪ್ರತಿಭಟನೆಯನ್ನು ಉದ್ಘಾಟಿಸಿದರು. ಸತೀಶ್ ರೈ ಸಭೆಯ ಅಧ್ಯಕ್ಷತೆ ವಹಿಸಿದರು. ಶೀನ, ಎಂ.ಆರ್.ರಘುನಾಥ ರೈ,ಜಯ ಬಿ.ಎಂ, ಯಶೋದಾ, ಮಲ್ಲಿಕಾ ಮೊದಲಾದವರು ಮಾತನಾಡಿದರು.

Related Posts

Leave a Reply

Your email address will not be published.