ಮಂಜೇಶ್ವರದ ಕುಂಡು ಕೊಳಕೆ ಬೀಚ್‍ನಲ್ಲಿ ಸಮ್ಮರ್ ಬೀಚ್ ಉತ್ಸವ : ಮೇ 8ರಂದು ಸಮಾಪ್ತಿ

ಮಂಜೇಶ್ವರ : ಉದ್ಯಾವರ ಎಎಚ್‍ಎಸ್ ತಂಡದ ಪ್ರಾಯೋಜಕತ್ವದಲ್ಲಿ ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಕುಂಡು ಕೊಳಕೆ ಬೀಚ್‍ನಲ್ಲಿ ಆರಂಭಗೊಂಡ ಸೀಸನ್ 3 ಸಮ್ಮರ್ ಬೀಚ್ ಉತ್ಸವದಲ್ಲಿ ಹಿಂದೆಂಂದೂ ಕಾಣದ ವೈವಿಧ್ಯತೆ ಕಂಡು ಬರುತ್ತಿದೆ. ಇನ್ನು ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿದ್ದು ಇದೇ ತಿಂಗಳು ಅಂದ್ರೆ ಇದೇ ತಿಂಗಳು ಮೇ 8 ಕ್ಕೆ ಸಮ್ಮರ್ ಫೈಸ್ಟ್ ಸಮಾಪ್ತಿಗೊಳ್ಳಲಿದೆ. ಎ ಎಚ್ ಎಸ್ ತಂಡ ಈ ಸಲದ ಸಮ್ಮರ್ ಫೆಸ್ಟ್ ಗೆ ಉಚಿತ ಪ್ರವೇಶವನ್ನೇ ಊರವರ ಮುಂದೆ ತೆರೆದಿಟ್ಟಿದೆ. ಮಕ್ಕಳಿಗೆ ರಜಾ ದಿನವಾಗಿರುವ ಹಿನ್ನೆಲೆಯಲ್ಲಿ ಮಂಜೇಶ್ವರದ ಜನತೆಗೆ ಇದೊಂದು ವರದಾನವಾಗಿದೆ. ಸಂಜೆಯಾಗುವಾಗ ಇಲ್ಲಿಗೆ ಜನ ಸಾಗರವೇ ಹರಿದು ಬರುತ್ತಿದೆ.

ಈ ಸಲದ ಸೀಸನ್ 3 ಮಂಜೇಶ್ವರ ಕಂಡು ಕೊಳಕೆ ಸಮ್ಮರ್ ಬೀಚ್ ಫೆಸ್ಟ್ ವಿವಿಧ ವಿನ್ಯಾಸಗಳನ್ನು ಹೊಂದಿದ್ದು, ಮಕ್ಕಳಿಗೆ ಹಾಗೂ ಹಿರಿಯರಿಗೆ ಹಿಂದಿಗಿಂತಲೂ ಭಿನ್ನವಾದ ವಿವಿಧ ರೀತಿಯ ಮನರಂಜನೆ ಲಭಿಸುತ್ತಿದೆ. ಊರ ಜನತೆಯಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತಮ ಗುಣಮಟ್ಟದ ಉತ್ಪನ್ನ ಹಾಗೂ ವಿವಿಧ ರೀತಿಯ ಮನ ರಂಜನೆಗಳನ್ನು ಸವಿಯಲು ದೂರ ದೂರ ಪ್ರದೇಶಗಳಿಂದಲೂ ಜನರು ಇಲ್ಲಿಗೆ ಆಗಮಿಸುತ್ತಿರುವುದು ವಿಶೇಷವಾಗಿದೆ. ವಾರದ ಕೊನೆ ದಿನಗಳಲ್ಲಿ ವೀಕ್ಷಕರನ್ನು ನಿಯಂತ್ರಿಸಲು ಅಸಾಧ್ಯವಾಗುವ ರೀತಿಯಲ್ಲಿ ಇಲ್ಲಿಯ ಮನರಂಜನೆಯನ್ನು ಸವಿಯಲು ಜನರು ಆಗಮಿಸುತಿದ್ದಾರೆ.

ಉತ್ಸವದಲ್ಲಿ ಅಳವಡಿಸಲಾಗಿರುವ ಈ ಸಲದ ಜಾಂಟ್ ವೀಲ್ ಕೇರಳದಲ್ಲೇ ಪ್ರಥಮವಾಗಿ ಕುಂಡು ಕೊಳಕೆ ಬೀಚ್ ಗೆ ಆಗಮಿಸಿದೆ. ಕೊಲಂಬಸ್, ಬ್ರೇಕ್ ಡ್ಯಾನ್ಸ್ , ಡ್ರಾಗನ್ ಟ್ರೈನ್, ಮಕ್ಕಳ ಹೆಲಿಕಾಪ್ಟರ್, ಸ್ಕಾರ್ಪಿಯೋ, ಜಂಪಿಂಗ್, ಬೋನ್ಸೇ , ಚಿಕ್ಕ ಮಕ್ಕಳ ಟ್ರೈನ್, ಬೋಟಿಂಗ್ ಸೇರಿದಂತೆ ಕಾಸರಗೋಡು ಮಂಗಳೂರು ನಗರಗಳಲ್ಲಿ ಪ್ರದರ್ಶನ ಕೊಂಡದ್ದಕ್ಕಿಂತ ಭಿನ್ನವಾದ ರೀತಿಯಲ್ಲಿ ವಿವಿಧ ಮನರಂಜನೆಗಳು ಆಗಮಿಸುವ ಜನತೆಯನ್ನು ಕೈ ಮಾಡಿ ಕರೆಯುತ್ತಿದೆ. ಇದರ ಜೊತೆಯಾಗಿ ವಿವಿಧ ರೀತಿಯ ಪುಡ್ ಗಳು, ವಿವಿಧ ರೀತಿಯ ಹೂವಿನ ಗಿಡಗಳು ಬೀಚ್ ಫೆಸ್ಟ್ ಗೆ ಆಗಮಿಸುವ ಜನತೆಗೆ ಆಕರ್ಷಕವಾಗುತ್ತಿದೆ.

Related Posts

Leave a Reply

Your email address will not be published.